ಉ.ಪ್ರ: 10ನೆ ತರಗತಿಯಲ್ಲಿ ಫೇಲಾದ ಬಾಲಕನ ಆತ್ಮಹತ್ಯೆ

Update: 2016-05-16 18:45 GMT

ಬಡೌನೌ, ಮೇ 16: ಉತ್ತರಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ 16ರ ಹರೆಯದ 10ನೆ ತರಗತಿಯ ವಿದ್ಯಾರ್ಥಿಯೊಬ್ಬ ಉೈತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ತನ್ನ ಮೊಬೈಲ್‌ನಲ್ಲಿ ಫಲಿತಾಂಶ ತಿಳಿದ ಬಳಿಕ ಜಿತೇಂದ್ರ ಎಂಬ ಈ ವಿದ್ಯಾರ್ಥಿ ಖುಶಾಲ್ಪುರ ಗ್ರಾಮದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡನೆಂದು ಅವರು ಹೇಳಿದ್ದಾರೆ.

ನಾವು ಜಿತೇಂದ್ರನನ್ನು ಸಮಾಧಾನಪಡಿಸಿದ್ದೆವು. ಆದರೆ, ಆತ ಸ್ನೇಹಿತರನ್ನು ಕಂಡುಬರುವೆನೆಂದು ಹೇಳಿ ಮನೆಯಿಂದ ಹೊರ ಹೋಗಿದ್ದನೆಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News