ಜೆಎನ್‌ಯು ಅಫ್ಝಲ್ ಗುರು ಕಾರ್ಯಕ್ರಮದ ನಾಲ್ಕು ವೀಡಿಯೊಗಳು ಅಸಲಿ:ಫಾರೆನ್ಸಿಕ್ ವರದಿ

Update: 2016-05-17 16:09 GMT

ಹೊಸದಿಲ್ಲಿ,ಮೇ 17: ಗಾಂಧಿನಗರದಲ್ಲಿರುವ ಸಿಬಿಐನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದ,ಜೆಎನ್‌ಯುನ ಫೆ.9ರ ವಿವಾದಾತ್ಮಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ನಾಲ್ಕು ವೀಡಿಯೊಗಳು ‘ಅಸಲಿ ’ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ, ನಕಲಿಯೆನ್ನಲಾಗಿರುವ ವೀಡಿಯೊ ಸೇರಿದಂತೆ ಇನ್ನೊಂದಿಷ್ಟು ವೀಡಿಯೊಗಳ ವರದಿಯು ಇನ್ನಷ್ಟೇ ಲಭ್ಯವಾಗಬೇಕಿದೆ.

 ನಾಲ್ಕು ವೀಡಿಯೊ ಕ್ಲಿಪ್‌ಗಳ ಕುರಿತು ವರದಿ ನಮಗೆ ಲಭಿಸಿದ್ದು, ಅವುಗಳು ಅಸಲಿ ಎಂದು ಹೇಳಲಾಗಿದೆ. ಇತರ ಕ್ಲಿಪ್‌ಗಳ ಕುರಿತು ವರದಿಗಾಗಿ ಕಾಯುತ್ತಿದ್ದೇವೆ ಎಂದು ವಿಶೇಷ ಪೊಲೀಸ್ ಆಯುಕ್ತ(ವಿಶೇಷ ಘಟಕ) ಅರವಿಂದ ದೀಪ್ ಅವರು ಮಂಗಳವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News