ಆಪ್‌ಗೆ 5, ಕಾಂಗ್ರೆಸ್ ಗೆ 4 ಸ್ಥಾನ, ಬಿಜೆಪಿಗೆ ಆಘಾತ

Update: 2016-05-17 17:58 GMT

ಹೊಸದಿಲ್ಲಿ, ಮೇ 17: ಮಂಗಳವಾರ ಪ್ರಕಟವಾದ ದಿಲ್ಲಿ ಸ್ಥಳೀಯಾಡಳಿತ ಉಪಚುನಾವಣೆಯ ಫಲಿತಾಂಶ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಮೊಗದಲ್ಲಿ ಸಂತಸ ಮೂಡಿಸಿದೆ. ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ 5 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 4 ಸ್ಥಾನಗಳನ್ನು ಬಾಚಿದೆ. ಬಿಜೆಪಿ ಮೂರು ಸ್ಥಾನಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದೆ. ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. 2012ರಲ್ಲಿ ನಡೆದ ಮುನಿಸಿಪಲ್ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತ್ತು.

ಎಎಪಿ ಅಭ್ಯರ್ಥಿಗಳು ವಿಕಾಸ್ ನಗರ್, ಮಟಿಯಾಲ, ನಾನಕ್ ಪುರ, ಬಲ್ಲಿಮಾರನ್, ತೆಖಂಡ್‌ನಲ್ಲಿ ವಿಜಯ ಸಾಧಿಸಿದರೆ, ಕಾಂಗ್ರೆಸ್ ಝಿಲ್ಮಿಲ್, ಕಿಚ್ರಿಪುರಿ, ಖಮರುದ್ದೀನ್ ನಗರ್ ಹಾಗೂ ಮುನಿರ್ಕದಲ್ಲಿ ಜಯ ಗಳಿಸಿದೆ.
ಕೆಲವೊಂದು ಕೌನ್ಸಿಲರ್‌ಗಳು 2013 ಹಾಗೂ 2015ರಲ್ಲಿ ನಡೆದ ದಿಲ್ಲಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಕಾರಣ ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಸಬೇಕಾಯಿತು.
 ಮೂರು ಕಾರ್ಪೊರೇಷನ್‌ಗಳಿಗೆ ಚುನಾವಣೆ ಮುಂದಿನ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವುದರಿಂದ ಈ ಉಪಚುನಾವಣೆಯ ಫಲಿತಾಂಶ ಮುಖ್ಯ ಚುನಾವಣೆಯ ಮುನ್ನ ಸೆಮಿಫೈನಲ್ ಎಂದೇ ಬಣ್ಣಿಸಲಾಗುತ್ತಿದೆ.
  ಎಲ್ಲಾ 13 ಖಾಲಿ ಸ್ಥಾನಗಳಿಗೆ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಈ ವರ್ಷದ ಜನವರಿ 29ರಂದು ದೆಹಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ವಿಚಾರಣೆನಡೆಸಿ ಆದೇಶಿಸಿತ್ತು. ಒಂಬತ್ತು ವಾರ್ಡುಗಳು ಡಿಸೆಂಬರ್ 2013ರಿಂದ ಖಾಲಿಯಿದ್ದರೆ. ಉಳಿದವು ಫೆಬ್ರವರಿ 2015ರಿಂದ ಖಾಲಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News