ಕೋರ್ಟ್‌ಮಾರ್ಷಲ್ ವಿರುದ್ಧ ಕಾನೂನು ಸಮರ ಗೆಲ್ಲುವ ಯೋಧರಿಗೆ ಪರಿಹಾರ ಅಗತ್ಯ: ಸುಪ್ರೀಂಕೋರ್ಟ್ ನ್ಯಾಯಾಧೀಶ

Update: 2016-05-17 18:12 GMT

ನಾಗಪುರ, ಮೇ 17: ಕೋರ್ಟ್‌ಮಾರ್ಷಲ್ ವೇಳೆ ತಪ್ಪಿತಸ್ಥರೆಂದು ಸಾಬೀತಾದ ಯೋಧರನ್ನು ಮರುನೇಮಕ ಮಾಡಿಕೊಳ್ಳುವ ಬದಲು, ಅವರು ಕಾನೂನು ಸಮರದಲ್ಲಿ ಗೆದ್ದಾಗ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸಮೀಪದ ಕಂಪ್ಟಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಮಿಲಿಟರಿ ಲಾ ಸಂಸ್ಥೆಯ ರಜತಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಅರ್ಜುನ್ ಕುಮಾರ್ ಸಿಕ್ರಿ, ಸಶಸ್ತ್ರ ಪಡೆಗಳಲ್ಲಿ ಕಠಿಣ ಶಿಸ್ತನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವನ್ನು ಪ್ರತಿಪಾದಿಸಿದರು.
ಕೈಗಾರಿಕಾ ವ್ಯಾಜ್ಯ ಕಾಯ್ದೆಯಡಿ ಸಿವಿಲ್ ಪ್ರಕರಣಗಳಲ್ಲಿ ಇಂಥ ಅವಕಾಶ ಲಭ್ಯವಿದೆ. ಇಂಥ ಪ್ರಕರಣಗಳಲ್ಲಿ ಖಾಸಗಿ ಕಂಪೆನಿಗಳು ಹೆಚ್ಚುವರಿ ಪರಿಹಾರ ಅಥವಾ ಒಂದು ಬಾರಿಯ ಇತ್ಯರ್ಥ ಅಥವಾ ಪಾವತಿ ಮಾಡುತ್ತವೆ ಎಂದು ತಮ್ಮ ನಿಲುವನ್ನು ನ್ಯಾಯಮೂರ್ತಿ ಸಿಕ್ರಿ ಸಮರ್ಥಿಸಿಕೊಂಡರು.
ಜಾಗತೀಕರಣದ ಸನ್ನಿವೇಶದಲ್ಲಿ ಒಂದು ಕಂಪೆನಿ ನಿರ್ದಿಷ್ಟ ಉದ್ಯೋಗಿಯನ್ನು ಉಳಿಸಿಕೊಳ್ಳಲು ಇಚ್ಛಿಸದಿದ್ದರೆ, ಇಂಥ ತಂತ್ರವನ್ನು ಅನುಸರಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News