ಅಕ್ಬರ್- ಹಿಟ್ಲರ್ ಹೋಲಿಕೆ : ನಗೆಪಾಟಲಿಗೀಡಾದ ಬಿಜೆಪಿ ನಾಯಕಿ

Update: 2016-05-18 12:21 GMT

ನವದೆಹಲಿ : ದೆಹಲಿಯ ಔರಂಗ್ ಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆಯೆಂದುಬದಲಿಸಿದ ನಂತರಪ್ರಮುಖ ರಸ್ತೆಗಳನ್ನು ಪುನರ್ ನಾಮಕರಣಗೊಳಿಸುವ ವಿವಾದಕೊನೆಗೊಂಡಿತೆಂದು ನೀವಂದುಕೊಂಡಿದ್ದರೆ ಅದು ತಪ್ಪು. ಹಲವು ಹಿರಿಯ ಬಿಜೆಪಿ ನಾಯಕರು ಈಗ ರಾಜಧಾನಿಯ ಅಕ್ಬರ್ ರಸ್ತೆಯ ಬೆನ್ನು ಬಿದ್ದಿದ್ದಾರೆ.

ಈ ವಿಚಾರದಲ್ಲಿ ಇತ್ತೀಚಿಗಿನ ಬೆಳವಣಿಗೆಯೊಂದಂತೂ ಭಾರೀ ಕುತೂಹಲ ಕೆರಳಿಸಿದೆಯಲ್ಲದೆ ಈ ವಿವಾದವನ್ನು ಗಂಭೀರ ಸ್ವರೂಪಕ್ಕೆ ತಿರುಗುವಂತೆ ಮಾಡಿದೆ. ಬಿಜೆಪಿ ನಾಯಕಿ ಶೈನಾ ಎನ್ ಸಿ ಟ್ವೀಟೊಂದನ್ನು ಮಾಡಿ ಅಕ್ಬರ್ ನನ್ನು ಹಿಟ್ಲರಿಗೆ ಹೋಲಿಸಿರುವುದು ಟ್ವಿಟ್ಟರಿನಲ್ಲಿ ಹಲವರಆಕ್ರೋಶಕ್ಕೆ ಕಾರಣವಾಗಿದೆಯಲ್ಲಿದೆ ಶೈನ್ ಅವರು ತಮ್ಮ ಈ ಟ್ವೀಟ್ ನಿಂದಾಗಿ ನಗೆಪಾಟಲಿಗೀಡಾಗಿದ್ದಾರೆ. ಹಲವರು ಶೈನಾ ಅವರ ಶೈಕ್ಷಣಿಕ ಅರ್ಹತೆಯನ್ನೂ ಪ್ರಶ್ನಿಸಿದ್ದಾರೆ.

‘‘ಅಕ್ಬರ್ ರೋಡ್ ಶುಡ್ ಬಿ ರೀನೇಮ್ಡ್ ಟು ಮಹಾರಾಣಾ ಪ್ರತಾಪ್ ಮಾರ್ಗ್. ಇಮ್ಯಾಜಿನ್ ಹಿಟ್ಲರ್ ರೋಡ್ ಇನ್ ಇಸ್ರೇಲ್ ! ನೋ ಕಂಟ್ರಿ ಹಾನರ್ಸ್‌ ಇಟ್ಸ್ ಒಪ್ಪ್ರೆಸ್ಸರ್ಸ್‌ ಲೈಕ್ ವಿ ಡೂ.’’ (ಅಕ್ಬರ್ ರೋಡನ್ನು ಮಹಾರಾಣಾ ಪ್ರತಾಪ್ ಮಾರ್ಗ್ ಎಂದು ಮರುನಾಮಕರಣಗೊಳಿಸಬೇಕು. ಇಸ್ರೇಲ್ ನಲ್ಲಿ ಹಿಟ್ಲರ್ ರಸ್ತೆಯನ್ನು ಊಹಿಸಿಕೊಳ್ಳಿ ! ನಮ್ಮಷ್ಟು ಬೇರೆ ಯಾವ ದೇಶವೂದೌರ್ಜನ್ಯಕಾರರಿಗೆ ಗೌರವ ನೀಡುವುದಿಲ್ಲ !’’

ಈ ರಸ್ತೆಯನ್ನು ಮಹಾರಾಣಾ ಪ್ರತಾಪ್ ರಸ್ತೆಯೆಂದು ಪುನರ್ ನಾಮಕರಣ ಮಾಡುವ ಸಲಹೆ ಮೊದಲು ಬಂದಿದ್ದು ಹರ್ಯಾಣಾದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ. ಇದಾದ ಸ್ವಲ್ಪ ದಿನಗಳಲ್ಲಿಯೇ ಈ ಸಲಹೆಯನ್ನು ಬೆಂಬಲಿಸಿದವರು ಇನ್ನೊಬ್ಬ ಪ್ರಭಾವಿ ಬಿಜೆಪಿ ನಾಯಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್.

ನಂತರ ಒಬ್ಬೊಬ್ಬರಾಗಿ ಕೇಸರಿ ಪಡೆಯ ಹಲವು ನಾಯಕರು ತಮ್ಮ ಹಿರಿಯ ನಾಯಕರ ಬೇಡಿಕೆಗಳನ್ನು ಸಮರ್ಥಿಸಲಾರಂಭಿಸಿದರಲ್ಲದೆ ರಸ್ತೆಯ ಹೆಸರನ್ನು ಅಕ್ಬರ್ ರಸ್ತೆ ಎಂದೇ ಮುಂದುವರಿಸುವುದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಹೇಳಿಕೊಳ್ಳಲಾರಂಭಿಸಿದರು.

ಅಕ್ಬರ್ ರಸ್ತೆ ಪುನರ್ ನಾಮಕರಣಗೊಳಿಸಬೇಕೆಂಬ ಬೇಡಿಕೆಯು ಗಂಭೀರ ವಿವಾದದ ಸ್ವರೂಪ ಪಡೆದುಕೊಂಡಿದ್ದೇ ಬಿಜೆಪಿ ನಾಯಕಿ ಶೈನ್ ಎನ್ ಸಿ ಟ್ವೀಟ್ ಮಾಡಿ ಅಕ್ಬರ್ ನನ್ನು ಹಿಟ್ಲರಿಗೆ ಹೋಲಿಸಿದಾಗ.

ಇವರ ಈ ಟ್ವೀಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಟ್ವಿಟ್ಟರಿನಲ್ಲಿ ಹಲವರು ಶೈನಾ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿದ್ದಾರೆ.

ಹಿಂದೂಗಳು ಹಾಗೂ ಮುಸಲ್ಮಾನರ ನಡುವೆ ಸ್ನೇಹ ಸೇತುಗಳನ್ನು ನಿರ್ಮಿಸಲು ಪ್ರಯತ್ನಿಸಿದ  ಕೆಲವು ಮುಘಲ್ ಅರಸರಲ್ಲಿ ಅಕ್ಬರ್ ಒಬ್ಬನಾಗಿದ್ದ ಹಾಗೂ ಧಾರ್ಮಿಕ ಸಹಿಷ್ಣುತೆಗಾಗಿ ದೀನ್-ಇ-ಇಲ್ಲಾಹಿ ಕೂಡ ಸ್ಥಾಪಿಸಿದ್ದನೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News