ಪ್ರತಿ ಮಗುವಿಗೆ ಇನ್ನು ಆಧಾರ್ ಕಾರ್ಡ್ ಐಡೆಂಟಿಟಿ

Update: 2016-05-19 07:31 GMT

ಹೊಸದಿಲ್ಲಿ, ಮೇ 19: ಆಧಾರ್ ಕಾರ್ಡ್ ಅಥವಾ ಯುನಿಕ್ ಐಡೆಂಟಿಟಿ ನಂಬರ್ ದೇಶದ ಪ್ರತಿಯೊಬ್ಬ ಮಗುವಿನ ಗುರುತು ಪತ್ರ ಆಗಲಿದೆ. ಯಾಕೆಂದರೆ ಇನ್ನುಮುಂದೆ ದೇಶಾದ್ಯಂತ ಇರುವ ಎಲ್ಲ ಶಾಲೆಗಳಲ್ಲಿ ಮಕ್ಕಳ ರಿಪೋರ್ಟ್‌ಕಾರ್ಡನ್ನು ಆಧಾರ್ ಕಾರ್ಡ್ ಅಥವಾ ಯುನಿಕ್ ನಂಬರ್ ಆಧರವಾಗಿಟ್ಟು ತಯಾರಿಸಲಾಗುವುದು ಎಂದು ವರದಿಯಾಗಿದೆ. ಇದರ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮಕ್ಕಳನ್ನು ಶಾಲೆಯಲ್ಲಿ ದಾಖಲಾತಿ ಮಾಡುವಲ್ಲಿಂದ ಅವರ ಶಿಕ್ಷಣ, ಶಾಲೆತೊರೆಯುವುದು, ಶಿಕ್ಷಕರ ಟೈಮ್ ಮಾನಿಟರಿಂಗ್ ಕೂಡಾ ಮಾಡಲಿದೆ. ಇದರಲ್ಲಿ ಮಕ್ಕಳು ಶಿಕ್ಷಣದೊಂದಿಗೆ ಸಂಬಂಧ ಇರಿಸಿಕೊಳ್ಳಲಿಕ್ಕಾಗಿ ಶಾಲಾಬಸ್‌ವ್ಯವಸ್ಥೆಯ ಸೌಲಭ್ಯವನ್ನೂ ನೀಡಲಾಗುವುದು.

ಸಚಿವಾಲಯದ ಶಿಫಾರಸು ಪ್ರಕಾರ ಹದಿನೈದು ರಾಜ್ಯಗಳಲ್ಲಿ ಕೆಲಸ ಆರಂಭವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಕಾರ ದೇಶದಲ್ಲಿ ಎಷ್ಟು ಶಾಲೆಗಳಿವೆ. ಎಷ್ಟು ಮಕ್ಕಳು ಕಲಿಯುತ್ತಿವೆ. ಅವರ ಫಲಿತಾಂಶ ಹೇಗಿದೆ. ಶಿಕ್ಷಕ ಯಾವ ಕ್ಲಾಸುಕಲಿಸುತ್ತಿದ್ದಾರೆ ಮತ್ತು ಏನು ಕಲಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳಲಾಗುವುದು. ಈವರೆಗೆ ಕೇಂದ್ರ ಸರಕಾರಕ್ಕೆ ಈ ಮಾಹಿತಿ ಇರಲಿಲ್ಲ. ರಾಜ್ಯಸರಕಾರಗಳ ಬಳಿಯೂ ಇರುತ್ತಿರಲಿಲ್ಲ. ಇದರಿಂದಾಗಿ ಶಾಲಾ ಶಿಕ್ಷಣಕ್ಕಾಗಿ ಬಜೆಟ್ ಮತ್ತು ಯೋಜನೆಗಳನ್ನು ರೂಪಿಸುವ ವೇಳೆ ಸಮಸ್ಯೆಯಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News