ಬ್ಯಾಂಕ್ ಕ್ಯಾಶಿಯರ್ ಬಳಿ ಕೊಟ್ಯಂತರ ರೂ. ಅಕ್ರಮ ಆಸ್ತಿ

Update: 2016-05-19 07:35 GMT

ಛತರ್‌ಪುರ್,ಮೇ 19: ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು ಇಂದು ಛತರ್‌ಪುರ್‌ಜಿಲ್ಲೆಯ ನೌಗಾಂವ್ ಜಿಲ್ಲಾ ಸಹಕಾರಿ ಬ್ಯಾಮಕ್‌ನ ಕ್ಯಾಶಿಯರ್‌ನ ಮನೆ ತಪಾಸಣೆ ಮಾಡಿ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಸೊತ್ತುಗಳನ್ನು ಪತ್ತೆಹಚ್ಚಿದ್ದಾರೆಂದು ವರದಿಯಾಗಿದೆ. ಆದಾಯಕ್ಕಿಂತ ಹೆಚ್ಚು ಸೊತ್ತುಗಳನ್ನು ಹೊಂದಿರುವ ವ್ಯಕ್ತಿ ಇಶಾ ನಗರದಲ್ಲಿಜಿಲ್ಲಾ ಸಹಕಾರಿಬ್ಯಾಂಕ್‌ನ ಶಾಖೆಯೊಂದರ ಕ್ಯಾಶಿಯರ್ ಆಗಿರುವ ಜಗದೀಶ್ ಸುಲ್ಲೇರ್ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.. ಈತ ಹೊಂದಿದ ಆಸ್ತಿಗಳಲ್ಲಿ ಹಲವಾರು ಪ್ಲಾಟ್‌ಗಳು, ಕೃಷಿಭೂಮಿ, 24 ಲಕ್ಷ ರೂ. ಮೌಲ್ಯದ ಆಭರಣ, ಐದು ಲಕ್ಷ 40ಸಾವಿರ ನಗದು, ಪತ್ನಿಯ ಹೆಸರಲ್ಲಿರುವ ಎಪ್ಪತ್ತು ಲಕ್ಷ ರೂ. ಮೌಲ್ಯದ ಎರಡುಮನೆಗಳ ದಾಖಲೆಗಳು ಲೋಕಾಯುಕ್ತ ಪೊಲೀಸರಿಗೆ ದೊರೆತಿವೆ. ತನಿಖೆ ಮುಂದುವರಿದಿದ್ದು ಈತ ಇನ್ನಷ್ಟು ಸೊತ್ತುಗಳನ್ನು ಹೊಂದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News