ಮುಸ್ಲಿಮರು ಕಾಂಗ್ರೆಸ್ ಗೆ ಕೈ ಕೊಡುತ್ತಿದ್ದಾರೆಯೇ ?

Update: 2016-05-20 03:13 GMT

ಹೊಸದಿಲ್ಲಿ, ಮೇ 20: ಜಮ್ಮು ಕಾಶ್ಮೀರ ಹೊರತುಪಡಿಸಿದರೆ, ಅತ್ಯಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯಗಳು ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಕೇರಳ. ಆದ್ದರಿಂದ ಈ ಸಮುದಾಯದ ಒಲವು ಯಾವ ಕಡೆಗಿರುತ್ತದೆ ಎನ್ನುವುದು ಸಹಜವಾಗಿಯೇ ಆಸಕ್ತಿ ಹುಟ್ಟಿಸುವುದು ಮಾತ್ರವಲ್ಲದೇ ಫಲಿತಾಂಶದ ನಿರ್ಧಾರಕ ಅಂಶವೂ ಆಗಿರುತ್ತದೆ. ಆದ್ದರಿಂದ ಮುಸ್ಲಿಂ ಮತದಾರರು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಫಲಿತಾಂಶ ಏನಾಗಿದೆ?

ಕೇರಳದ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕೂಡಾ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸಾಧನೆ ಕಳೆದ ಬಾರಿಗಿಂತಲೂ ಕಳಪೆ. ಕಾಂಗ್ರೆಸ್‌ಗೆ ಆಶಾದಾಯಕ ಎಂದರೆ ಪಶ್ಚಿಮ ಬಂಗಾಳ ಮಾತ್ರ. ಇಲ್ಲಿ ಸ್ಥಾನ ಹಾಗೂ ಮತಗಳಿಕೆ ಎರಡರಲ್ಲೂ ಕಳೆದ ಬಾರಿಗಿಂತ ಸಾಧನೆ ಉತ್ತಮವಾಗಿದೆ. ಅಸ್ಸಾಂನಲ್ಲಿ ಹೆಚ್ಚುವರಿ ಸ್ಥಾನ ಗೆದ್ದಿದ್ದರೂ, ಮತಗಳಿಕೆ ಗಣನೀಯವಾಗಿ ಕುಸಿದಿದೆ. ಮೂರೂ ರಾಜ್ಯಗಳ ಮುಸ್ಲಿಂ ಪ್ರಾಬಲ್ಯದ ಸ್ಥಾನಗಳಲ್ಲಿ ಲಾಭವಾಗಿರುವುದು ಬಿಜೆಪಿಗೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿ ಪರವಾಗಿ ಮುಸಲ್ಮಾನೇತರ ಮುಖಗಳ ಒಗ್ಗೂಡುವಿಕೆ. ಅಸ್ಸಾಂನಲ್ಲಿ ಮುಸ್ಲಿಂ ಪ್ರಾಬಲ್ಯದ 36 ಸ್ಥಾನಗಳ ಪೈಕಿ ಕಾಂಗ್ರೆಸ್ 14 ಗೆದ್ದಿದ್ದರೆ ಎಐಯುಡಿಎಫ್ 17 ಸ್ಥಾನ ಪಡೆದಿತ್ತು. ಈ ಬಾರಿ ಕಾಂಗ್ರೆಸ್ ತನ್ನ ಬಲವನ್ನು 15ಕ್ಕೆ ಹೆಚ್ಚಿಸಿಕೊಂಡಿದ್ದರೆ, ಎಐಯುಡಿಎಫ್ ಬಲ 11ಕ್ಕೆ ಕುಸಿದಿದೆ. ಮುಸ್ಲಿಂ ಪ್ರಾಬಲ್ಯದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಎಜಿಪಿ 2 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ,

ಕೇರಳದಲ್ಲಿ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಲಾಭ ಪಡೆದಿದೆ. 43 ಸ್ಥಾನಗಳ ಪೈಕಿ ಕಳೆದ ಬಾರಿ ಯುಡಿಎಫ್ ಹಾಗೂ ಎಲ್‌ಡಿಎಫ್ ನಡುವಿನ ಹಂಚಿಕೆ 29-14 ಇದ್ದುದು ಈ ಬಾರಿ ಎಲ್‌ಡಿಎಫ್ 22 ಹಾಗೂ ಯುಡಿಎಫ್ 21 ಸ್ಥಾನ ಪಡೆದಿವೆ. ಯುಡಿಎಫ್ ಮತಗಳಿಕೆ ಈ ಕ್ಷೇತ್ರಗಳಲ್ಲಿ ಶೇಕಡ 47.8ರಿಂದ 38.4ಕ್ಕೆ ಕುಸಿದಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಪರವಾಗಿ ಮುಸ್ಲಿಮರ ಒಲವು ಇಲ್ಲ. ಮುಸ್ಲಿಂ ಮತಗಳು ಅಧಿಕವಾಗಿರುವ 65 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ 38ನ್ನು ಗೆದ್ದುಕೊಂಡಿದ್ದಾರೆ.

2011ರ ಚುನಾವಣೆಯಲ್ಲಿ ಟಿಎಂಸಿ 30 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆ ಪಕ್ಷದ ಮತಗಳಿಕೆ ಕೂಡಾ ಶೇಕಡ 29.3ರಿಂದ 40.8ಕ್ಕೆ ಹೆಚ್ಚಿದೆ. ಎಡಪಕ್ಷಗಳ ಮತಗಳಿಕೆ ಶೇಕಡ 41.7ರಿಂದ 24.2ಕ್ಕೆ ಕುಸಿದಿದೆ. ಕುತೂಹಲದ ಅಂಶವೆಂದರೆ ಕಾಂಗ್ರೆಸ್ ತನ್ನ ಸಾಧನೆ ಉತ್ತಮಪಡಿಸಿಕೊಂಡಿದೆ. 2011ರಲ್ಲಿ 16 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ 18 ಸ್ಥಾನ ಪಡೆದಿದೆ. ಅದರ ಮತಗಳಿಕೆ ಕೂಡಾ ಶೇಕಡ 14.4ರಿಂದ 19.3ಕ್ಕೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News