ಪಿನರಾಯಿ ವಿಜಯನ್‌ ಕೇರಳದ ನೂತನ ಮುಖ್ಯ ಮಂತ್ರಿ

Update: 2016-05-20 11:48 GMT


ತಿರುವನಂತಪುರ, ಮೇ 20: ಹಿರಿಯ ಸಿಪಿಐ(ಎಂ) ಪಾಲಿಟ್‌ ಬ್ಯುರೋ ಸದಸ್ಯ ಪಿನರಾಯಿ ವಿಜಯನ್‌ ಕೇರಳದ ನೂತನ ಮುಖ್ಯ ಮಂತ್ರಿಯಾಗಿ ಇಂದು ಆಯ್ಕೆಯಾಗಿದ್ದಾರೆ.
 ಇಂದು ನಡೆದ ಎಲ್‌ಡಿಎಫ್‌  ನಾಯಕರ ಸಭೆಯ ಬಳಿಕ ಪಕ್ಷದ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಈ ವಿಚಾರ ಸುದ್ದಿಗಾರರಿಗೆ  ತಿಳಿಸಿದರು.
ಪಕ್ಷದ ಕಾರ್ಯದರ್ಶಿಯಾಗಿ ಸುದೀರ್ಘ  ಕಾಲ ಸೇವೆ ಸಲ್ಲಿಸಿರುವ  72ರ ಹರೆಯದ ಪಿನರಾಯಿ ವಿಜಯನ್‌ ಕಳೆದ ಚುನಾವಣೆಯಲ್ಲಿ ಧರ್ಮದಮ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಐದನೆ ಬಾರಿ ಶಾಸಕರಾಗಿರುವ ವಿಜಯನ್‌ ಮತ್ತು ಅಚ್ಚುತಾನಂದನ್‌ ಅವರ ನಡುವೆ ಮುಖ್ಯ ಮಂತ್ರಿ ಹುದ್ದೆಗೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ವಯಸ್ಸಿನಲ್ಲಿ ಅಚ್ಚುತಾನಂದನ್‌  ಅವರಿಗಿಂತ ಇಪ್ಪತ್ತು ವರ್ಷ  ಕಿರಿಯರಾದ ಪಿನರಾಯ್‌ ವಿಜಯನ್‌  ಮೊದಲ ಬಾರಿ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸುವ  ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News