ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳ ರವಾನೆ

Update: 2016-05-20 13:18 GMT

ಕೊಚ್ಚಿ,ಮೇ 20: ರೋನು ಚಂಡಮಾರುತದ ಹಾವಳಿಯಿಂದಾಗಿ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತವು ಶುಕ್ರವಾರ ನೌಕಾಪಡೆಯ ಎರಡು ಹಡಗುಗಳು ಮತ್ತು ಸಿ-17 ವಿಮಾನದ ಮೂಲಕ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ರಕ್ಷಣಾ ತಜ್ಞರನ್ನೂ ದ್ವೀಪರಾಷ್ಟ್ರಕ್ಕೆ ಕಳುಹಿಸಲಾಗಿದೆ.

ಶ್ರಿಲಂಕಾ ಕೋರಿರುವ ಎಲ್ಲ ನೆರವನ್ನೂ ಒದಗಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ತಿಳಿಸಿದರು.

 ಚಂಡಮಾರುತವು ಶ್ರೀಲಂಕಾ ಕರಾವಳಿಯಲ್ಲಿ ಸರ್ವನಾಶವನ್ನುಂಟು ಮಾಡಿದೆ. ಅರನಾಯಕೆ ಮತ್ತು ಬುಲತ್‌ಕೊಹುಪಿತಿಯಾ ಪ್ರದೇಶಗಳಲ್ಲಿ ಭಾರೀ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ 63 ಜೀವಗಳು ಬಲಿಯಾಗಿದ್ದು, 134 ಜನರು ನಾಪತ್ತೆಯಾಗಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಜನರಿಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 354 ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News