ನಿತೀಶ್‌ರೊಂದಿಗಿನ ಮೈತ್ರಿ ಮುರಿಯುವ ಸಮಯವಾಯಿತು!:ಆರ್‌ಜೆಡಿ ಸಂಸತ್ ಸದಸ್ಯ

Update: 2016-05-22 06:21 GMT

ಪಾಟ್ನಾ, ಮೇ 22: ಬಿಹಾರದಲ್ಲಿ ನಿತೀಶ್ ಕುಮಾರ್‌ಜೊತೆಗಿನ ಮೈತ್ರಿ ಕೊನೆಗೊಳಿಸುವ ಸಮಯವಾಗಿದೆ ಎಂದು ಆರ್‌ಜೆಡಿ ಎಂಪಿ ತಸ್ಲಿಮುದ್ದೀನ್ ಹೇಳಿದ್ದಾರೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ರೊಂದಿಗೆ ತಸ್ಲಿಮುದ್ದೀನ್ ಹೀಗೆ ಹೇಳಿದ್ದು ರಾಜ್ಯದಲ್ಲಿ ಶಾಂತಿ ಸಮಾಧಾನ ಹದಗೆಟ್ಟಿದೆ, ಬಿಹಾರದಲ್ಲಿ ಕಾನೂನುವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಪದಕ್ಕೆ ನಿತೀಶ್ ಕುಮಾರ್ ಅರ್ಹವ್ಯಕ್ತಿಯಲ್ಲ. ಮುಂದಿನ ಪ್ರಧಾನಿ ಆಗುವ ಕನಸು ಕಾಣಬೇಕಾಗಿಲ್ಲ ಎಂದು ತಸ್ಲಿಮುದ್ದೀನ್ ನಿತೀಶ್‌ರಿಗೆ ವ್ಯಂಗ್ಯವಾಗಿ ಚುಚ್ಚಿದ್ದಾರೆ.

ನಿತೀಶ್ ಕುಮಾರ್ ವಿಷಯದಲ್ಲಿ ತೀರ್ಮಾನವನ್ನು ಲಾಲು ಪ್ರಸಾದ್ ಯಾದವ್ ಕೈಗೊಳ್ಳಬೇಕಿದೆ. ಜೆಡಿಯುವನ್ನು ಕೈಬಿಟ್ಟು ಸರಕಾರ ರಚನೆಗೆ ಪ್ರಯತ್ನಿಸಬೇಕಿದೆ ಎಂದು ತಸ್ಲಿಮುದ್ದೀನ್ ಹೇಳಿದ್ದಾರೆ. ಈಮೊದಲು ಆರ್‌ಜೆಡಿಯ ಇನ್ನೋರ್ವ ನಾಯಕ ರಘುವಂಶ್ ಪ್ರಸಾದ್ ಕೂಡಾ ನಿತೀಶ್ ಕುಮಾರ್‌ರನ್ನು ಟೀಕಿಸಿದ್ದರು. ನಿತೀಶ್ ಸ್ವಯಂಘೋಷಿತ ನಾಯಕನಾಗುವ ಹುಚ್ಚು ಶ್ರಮದಲ್ಲಿದ್ದಾರೆ ಎಂದು ಅವರುಟೀಕಿಸಿದ್ದರು. ಬಿಹಾರದ ಮೈತ್ರಿಸರಕಾರ ಇನ್ನು ಮುಂದೆ ಸಾಗದು ಎಂದು ಬಿಹಾರ ಬಿಜೆಪಿ ರಾಜ್ಯ ಅಧ್ಯಕ್ಷ ಮಂಗಲ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News