ನನ್ನ ಉಸಿರಿರುವವರೆಗೆ ಹೋರಾಟ ಮುಂದುವರಿಸುವೆ: ವಿ.ಎಸ್. ಅಚ್ಯುತಾನಂದನ್

Update: 2016-05-22 06:08 GMT

ತಿರುವನಂತಪುರಂ,ಮೇ 22: ಭ್ರಷ್ಟಾಚಾರ ಮತ್ತು ಕೊಮುವಾದದ ವಿರುದ್ಧ ಹೋರಾಟ ಮುಂದುವರಿಸುವೆ ಎಂದು ವಿ.ಎಸ್. ಅಚ್ಯುತಾನಂದನ್ ಹೇಳಿದ್ದಾರೆ. ಒಬ್ಬ ಕಮ್ಮುನಿಸ್ಟ್ ವ್ಯಕ್ತಿ ಎಂಬ ನೆಲೆಯಲ್ಲಿ ಈ ಚುನಾವಣೆಯಲ್ಲಿ ಐತಿಹಾಸಿಕವಾದ ಕೆಲವು ಜವಾಬ್ದಾರಿಕೆಯನ್ನು ನಿರ್ವಹಿಸಲಿಕ್ಕಿದೆ. ಆದ್ದರಿಂದ ಪಕ್ಷದ ಕೇಂದ್ರ ನಾಯಕತ್ವದ ಸೂಚನೆಯನ್ನು ಅಂಗೀಕರಿಸಿ ಸ್ಪರ್ಧಿಸಲು ತಯಾರಾಗಿದ್ದೆ. ಕೇರಳದ ಮಣ್ಣು, ಪ್ರಕೃತಿ ಹಾಗೂ ಮಾನವನ್ನು ಸಂರಕ್ಷಿಸಲಿಕ್ಕಾಗಿ ಉಸಿರಿರುವವರೆಗೆ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಅಚ್ಯುತಾನಂದನ್ ಫೇಸ್‌ಬುಕ್ ಪೊಸ್ಟ್‌ನಲ್ಲಿ ತಿಳಿಸಿದ್ದಾರೆ. ಕೇರಳದಲ್ಲಿ ಎಲ್‌ಡಿಎಫ್ ಗೆಲುವಿಗೆ ಪರಿಶ್ರಮಿಸಿದ ಎಲ್ಲರಿಗೂ ಅವರು ಮತ್ತೊಮ್ಮೆ ಕೃತಜ್ಞತೆಯನ್ನು ಸೂಚಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ರೀತಿ ಬರೆದಿದ್ದಾರೆ:

ಒಬ್ಬ ಕಮ್ಯುನಿಸ್ಟ್ ವ್ಯಕ್ತಿ ಎಂಬ ನೆಲೆಯಲ್ಲಿ ಈ ಚುನಾವಣೆಯಲ್ಲಿ ತಾನು ಐತಿಹಾಸಿಕವಾದ ಕೆಲವು ಜವಾಬ್ದಾರಿಕೆಗಳನ್ನು ನಿರ್ವಹಿಸಬೇಕಾಗಿದೆ. ಆದ್ದರಿಂದ ಪಕ್ಷದ ಕೇಂದ್ರ ನೇತೃತ್ವದ ನಿರ್ದೇಶನವನ್ನು ಅಂಗೀಕರಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಾಗಿದ್ದೆ. ರಾಷ್ಟ್ರೀಯ ಮಟ್ಟದಲ್ಲಿಕೋಮುವಾದಿ ಫಾಶಿಸ್ಟ್‌ಗಳಿಂದ ಭಾರತೀಯರು ಭಯಾನಕ ಸವಾಲನ್ನು ಎದುರಿಸುತ್ತಿದ್ದಾರೆ. ಇದನ್ನು ಪ್ರತಿರೋಧಿಸಬೇಕಾಗಿದ್ದ ಎಡಪಕ್ಷದ ನೆಲೆ ಪಕ್ಷದ ಶಕ್ತಿಕೇಂದ್ರವಾದ ಪಶ್ಚಿಮ ಬಂಗಾಳದಲ್ಲೂ ಅಷ್ಟು ಭದ್ರವಾಗಿರಲಿಲ್ಲ.

ಕೋಮುವಾದಿಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಅದರ ಬೆಳವಣಿಗೆ ಒತ್ತಾಶೆ ನೀಡುವ ಯುಡಿಎಫ್ ಸರಕಾರ ಕೇರಳದಲ್ಲಿತ್ತು. ಕೇರಳದ ಸಮಾಜವನ್ನು ಮಾನವೀಯ ಕ್ರಾಂತಿಯೆಡೆಗೆ ಒಯ್ದ ಶ್ರೀನಾರಾಯಣ ಗುರುವಿನ ಹೆಸರನ್ನುಕೂಡಾ ದುರುಪಯೋಗಿಸಲಾಯಿತು. ಸಾಮಾನ್ಯ ಜನರನ್ನು ವಿಭಜಿಸಲು ಕೆಲವು ಬಂಡವಾಳ ಶಾಹಿಗಳು ಪರಿಶ್ರಮಿಸಿದರು. ಕೋಮುವಾದಿ ಶಕ್ತಿಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದ ಈ ಸರಕಾರ ಮುಂದುವರಿದರೆ ಕೇರಳವನ್ನು ಮಾರಿ ಕೈತೊಳೆದುಕೊಳ್ಳುತ್ತಿತ್ತು ಮಾತ್ರವಲ್ಲ ಕೇರಳದ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ನೀರು ಮತ್ತು ಗೊಬ್ಬರ ನೀಡಿ ಆ ವಿಷ ಮರ ಬೆಳೆಯಲು ಅವಕಾಶ ಒದಗಿಸುತ್ತಿತ್ತು. ಕೇರಳವನ್ನು ನುಂಗಲು ಬಾಯ್ತೆರೆದು ನಿಂತಿರುವ ಈ ವಿಷಸರ್ಪದ ಮುಷ್ಟಿಯಿಂದ ಭಾವಿ ತಲೆಮಾರನ್ನು ರಕ್ಷಿಸಲು ಕೇರಳದಲ್ಲಿ ಎಡಪಕ್ಷಗಳ ಆಳ್ವಿಕೆ ಇರುವುದು ಅಗತ್ಯವಾಗಿತ್ತು.

ರಾಷ್ಟ್ರೀಯ ಮಟ್ಟದಲ್ಲಿ ಕೋಮುವಾದದ ವಿರುದ್ಧ ನಿಷ್ಠುರ ಹೋರಾಟ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷದ ಹೋರಾಟ ಶಕ್ತಿ ನೆಲೆಯಾಗಿರಲು ಕೇರಳದಲ್ಲಿ ಎಡಪಕ್ಷದ ವಿಜಯ ಅನಿವಾರ್ಯವಾಗಿತ್ತು. ಇಂತಹದೊಂದು ಐತಿಹಾಸಿಕ ಮುಹೂರ್ತದಲ್ಲಿ ಕೇರಳದಲ್ಲಿ ಎಡಪಕ್ಷಗಳ ಸರಕಾರ ಖಚಿತಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡೆ. ಏಳೂವರೆ ದಶಕಗಳ ಕಾಲದಿಂದ ಅವಿಶ್ರಾಂತವಾಗಿ ಕೆಂಪು ಬಾವುಟ ಹಿಡಿಯುವ ತನ್ನ ಕರ್ತವ್ಯವೂ ಅದಾಗಿತ್ತು.

ಕರ್ತವ್ಯವನ್ನು ನಿರ್ವಹಿಸಲು ಕೇರಳದಲ್ಲಿ ಅತ್ತಿತ್ತ ಸಂಚರಿಸಿ ಹೊಸ ಮಾಧ್ಯಮಗಳ ಮೂಲಕವೂ ಹೋರಾಟ ನಡೆಸಿದೆ. ಉಮ್ಮನ್ ಚಾಂಡಿಯಿಂದ ನರೇಂದ್ರ ಮೋದಿವರೆಗಿನ ಸುಳ್ಳರ ಕೂಟಗಳನ್ನು ಬಹಿರಂಗ ವಾಗಿ ತೋರಿಸಲು ನಾನು ಶ್ರಮಿಸಿದೆ. ನನ್ನನ್ನು ಟಾರ್ಗೆಟ್ ಮಾಡಿ ಆಕ್ರಮಿಸಲು, ಕೇಸಿನಲ್ಲಿ ಸಿಲುಕಿಸಿ ಹಾಕಲು ಅವರು ಶ್ರಮಿಸಿದರು. ಸದಾ ಹೋರಾಟರಂಗದಲ್ಲಿ ಬೆಂಬಲಿಸಿದ್ದ ಜನರು ಈಸಲವೂ ನನ್ನನ್ನು ಬೆಂಬಲಿಸಿದ್ದಾರೆ. 91 ಸೀಟುಗಳಲ್ಲಿ ಎಡ ಪಕ್ಷವನ್ನು ಜನರು ಗೆಲ್ಲಿಸಿ ಸ್ವಾಗತಿಸಿದ್ದಾರೆ. ಇಲ್ಲಿಯವರೆಗಿನ ನನ್ನ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನನಗೆ ಉಸಿರು ಇರುವವರೆಗೆ ಹೋರಾಟ ಮುಂದುವರಿಸುವೆ, ಭ್ರಷ್ಟಾಚಾರ-ಕೋಮುವಾದದ ವಿರುದ್ಧ ಹೋರಾಟಗಳು...ಕೇರಳದ ಮಣ್ಣು, ಪ್ರಕೃತಿ, ಮಾನ ರಕ್ಷಣೆಗಾಗಿರುವ ಹೋರಾಟಗಳು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News