ಇಬ್ಬರು ಐಎಎಸ್ ಅಭ್ಯರ್ಥಿಗಳ ಪ್ರತಿಭೆ, ಜಾತಿಕಥೆ

Update: 2016-05-22 07:30 GMT

ಹೊಸದಿಲ್ಲಿ,ಮೇ. 22: ಟೀನಾ ದುಬಿ ಎಂಬ ಪರಿಶಿಷ್ಟ ಜಾತಿಯ ಯುವತಿ ಈ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವ ವೇಳೆ ಯುಪಿಎಸ್‌ಸಿಗೆ ಆಕೆ ಕೇವಲ ಶೇಕಡ 52ರಷ್ಟು ಅಂಕ ಮಾತ್ರ ಬಂದಿದೆ ಎನ್ನುವುದು ಗಮನಕ್ಕೆ ಬಂದಿದೆ. ಇದು ಹಲವರ ಹುಬ್ಬೇರಿಸುವಂತೆ ಮಾಡಿದ್ದರೂ, ಇತರ ಅಭ್ಯರ್ಥಿಗಳು ಇದಕ್ಕಿಂತಲೂ ಕಡಿಮೆ ಅಂಕ ಪಡೆದಿದ್ದಾರೆ. ಆರೂವರೆ ದಶಕಗಳ ಇತಿಹಾಸದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಯೊಬ್ಬರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರರ್ಯಾಂಕ್ ಪಡೆದಿರುವುದು ಇದೇ ಮೊದಲು.

ಬಿಜೆಪಿ ಸಂಸದ ಉದಿತ್ ರಾಜ್ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, 40-50 ವರ್ಷಗಳ ಹಿಂದೆ ಇದು ಸಾಧ್ಯವಿರಲಿಲ್ಲ ಎಂದು ಹೇಳಿರುವುದು ಸಂಪೂರ್ಣ ಸರಿಯಲ್ಲ. ಮೊಟ್ಟಮೊದಲ ಐಸಿಎಸ್ ಪರೀಕ್ಷೆ ನಡೆದ 1950ರಲ್ಲೇ, ಪರಿಶಿಷ್ಟ ಜಾತಿಗೆ ಸೇರಿದ, ಅಚ್ಯುತಾನಂದ ದಾಸ್ ಐಎಎಸ್‌ಗೆ ಆಯ್ಕೆಯಾಗಿದ್ದರು. ಟೀನಾಗಿಂತ ಭಿನ್ನವಾಗಿ ದಾಸ್ ಪಟ್ಟಿಯಲ್ಲಿ ಕೊನೆಯವರಾಗಿದ್ದರು ಹಾಗೂ ಈ ಸಾಧನೆ ಅಷ್ಟಾಗಿ ಗಮನಕ್ಕೇ ಬರಲಿಲ್ಲ.

ಉದ್ಯೋಗದ ಬೇಟೆಯಲ್ಲಿ ಐಎಎಸ್ ಕೀರ್ತಿ ಪಡೆದ ಮೊಟ್ಟಮೊದಲ ಆದಿವಾಸಿ ಹಾಗೂ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ನಾನು. 1990ರಲ್ಲಿ ನಾನು ಕೊಲ್ಕತ್ತಾದಲ್ಲಿದ್ದಾಗ ಪದೇ ಪದೇ ರಾಷ್ಟ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ. ಅಂತಿಮವಾಗಿ ನಾನು ಯುಪಿಎಸ್‌ಸಿ ದಾಖಲೆಗಳಲ್ಲಿ ಕೈ ಇಟ್ಟೆ ಎಂದು ಟೀನಾ ಹೇಳುತ್ತಾರೆ.

ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಹಳೆವಿದ್ಯಾರ್ಥಿಯಾದ ಅಚ್ಯುತಾನಂದ ದಾಸ್, ಐಎಎಎಸ್ ಸಾಧನೆ ಮಾಡಿದ ಮೊದಲ ಪರಿಶಿಷ್ಟ ಅಭ್ಯರ್ಥಿಯಾಗಿ ಹಲವರಲ್ಲಿ ಅಚ್ಚರಿ ಮೂಡಿಸಿದ್ದರು. ಅವರ ಅಂಕಪಟ್ಟಿ ಉಪಯುಕ್ತವಾಯಿತು ಎಂದು ವಿವರಿಸಿದರು.

ಲಿಖಿತ ಪರೀಕ್ಷೆಯ ಒಟ್ಟು 1,050 ಅಂಕಗಳ ಪೈಕಿ ದಾಸ್ 609 ಅಂಕ ಅಂದರೆ ಶೇಕಡ 58 ಅಂಕ ಪಡೆದಿದ್ದರು. ಅಗ್ರಸ್ಥಾನ ಗಳಿಸಿದ ಎನ್.ಕೃಷ್ಣನ್ 602 ಅಂಕ ಪಡೆದು ಶೇಕಡ 57.3 ಅಂಕ ದಾಖಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ ಈ ಇಬ್ಬರು ಅಗ್ರಸ್ಥಾನ ಪಡೆದಿದ್ದರು. ಆದರೆ ಸಂದರ್ಶನದಲ್ಲಿ ಚಿತ್ರಣ ಬದಲಾಯಿತು. ಕೃಷ್ಣನ್ ಅಗ್ರಸ್ಥಾನ ಗಳಿಸಿದರೆ, ದಾಸ್ ಕೊನೆಯ ಸ್ಥಾನಕ್ಕೆ ಬಂದರು. ಸಂದರ್ಶನದಲ್ಲಿ 300 ಅಂಕಗಳ ಪೈಕಿ ಕೃಷ್ಣನ್ 260 ಅಂಕ ಪಡೆದರೆ, ದಾಸ್, 33 ಶೇಕಡ ಅಂದರೆ 110 ಅಂಕ ಮಾತ್ರ ಪಡೆದರು. ಇದರಿಂದಾಗಿ ದಾಸ್ ಅವರಿಗಿಂತ ಕೃಷ್ಣನ್ 150 ಅಂಕ ಹೆಚ್ಚುವರಿಯಾಗಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News