ಉತ್ತರಾಖಂಡ ಸಿಎಂ ರಾವತ್‌ಗೆ ಸಿಬಿಐ ನೋಟಿಸ್

Update: 2016-05-22 08:46 GMT

ಡೆಹ್ರಾಡೂನ್, ಮೇ 22: ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆತೋರಿದ್ದಾಗ ಕಾಂಗ್ರೆಸ್‌ನ ಕೆಲವು ಮುಖಂಡರು ಭಾಗಿಯಾಗಿದ್ದರೆನ್ನಲಾದ ಸ್ಟಿಂಗ್ ಆಪರೇಶನ್‌ಗೆ ಸಂಬಂಧಿಸಿ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್‌ಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

  70 ಸದಸ್ಯರನ್ನು ಒಳಗೊಂಡ ಉತ್ತರಾಖಂಡ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಂಡಾಯ ಎದ್ದಿರುವ ತನ್ನದೇ ಪಕ್ಷದ 10 ಶಾಸಕರನ್ನು ಪಕ್ಷದತ್ತ ಸೆಳೆಯಲು ರಾವತ್ ಸೇರಿದಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಲಂಚ ನೀಡುತ್ತಿರುವ ದೃಶ್ಯ ಸ್ಟಿಂಗ್ ವೀಡಿಯೊದಲ್ಲಿ ಬಹಿರಂಗವಾಗಿತ್ತು.

ರಾವತ್‌ಗೆ ರವಿವಾರ ನೊಟೀಸ್ ಜಾರಿ ಮಾಡಿರುವ ಸಿಬಿಐ ಮೇ 24 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಬಂಡಾಯ ಕಾಂಗ್ರೆಸ್ ಶಾಸಕರಿಗೆ ಲಂಚ ನೀಡಲು ಯತ್ನಿಸುತ್ತಿದ್ದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ರಾವತ್‌ಗೆ ಸಿಬಿಐ ಈ ಹಿಂದೆ ಮೇ 5 ರಂದು ನೋಟಿಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ರಾವತ್ ತಾನು ಸ್ಟಿಂಗ್ ಆಪರೇಶನ್ ವೀಡಿಯೊದಲ್ಲಿರುವುದನ್ನು ಒಪ್ಪಿಕೊಂಡಿದ್ದಲ್ಲದೆ, ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News