ಜೆಎನ್‌ಯು ವಿದ್ಯಾರ್ಥಿಯಿಂದ ಸಹಪಾಠಿ ಅತ್ಯಾಚಾರ: ಬಂಧನ

Update: 2016-05-22 18:22 GMT

ಹೊಸದಿಲ್ಲಿ, ಮೇ 22: ಸಹಪಾಠಿಯೊಬ್ಬಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ 23ರ ಹರೆಯದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ದೂರುದಾರೆ ಹಾಗೂ ಆರೋಪಿ ಇಬ್ಬರೂ ವಿವಿಯ ಇತಿಹಾಸ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದಾರೆ. ಡಿಸೆಂಬರ್‌ನಲ್ಲಿ ದೂರುದಾರೆ ಹಾಗೂ ಆರೋಪಿ ಸ್ನೇಹಿತನೊಬ್ಬನ ಬಾಡಿಗೆ ಮನೆಗೆ ಪಾರ್ಟಿಗಾಗಿ ಹೋಗಿದ್ದಾಗ ಈ ಘಟನೆ ಸಂಭವಿಸಿತ್ತು. ಆರೋಪಿ ಆಕೆಯನ್ನು ಬಲಾತ್ಕರಿಸಿದ್ದನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದಾಗ್ಯೂ, ಸಂತ್ರಸ್ತೆ ಗುರುವಾರ ಪೊಲೀಸರನ್ನು ಸಮೀಪಿಸಿ ದೂರು ನೀಡಿದ್ದಾಳೆ. ಘಟನೆಯ ಸಂಬಂಧ ತಕ್ಷಣವೇ ಐಪಿಸಿ ಸೆ.376ರನ್ವಯ (ಅತ್ಯಾಚಾರ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಆರೋಪಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News