ಜಿಶಾ ಕೊಲೆ ಪ್ರಕರಣ: ಕುಂಟುತ್ತಿರುವ ತನಿಖೆ!

Update: 2016-05-23 05:37 GMT

ಪೆರುಂಬಾವೂರ್, ಮೇ 23: ಕೇರಳದ ಮನಸಾಕ್ಷಿಯನ್ನು ನಡುಗಿಸಿದ ಜಿಶಾ ಕೊಲೆ ಪ್ರಕರಣದ ತನಿಖೆ ಹೊಸ ಸರಕಾರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಹಲವು ವಿಧದ ತನಿಖೆಗಳುನಡೆದರೂ ಪ್ರಕರಣದ ಜಾಡು ಹಿಡಿಯಲು ಪೊಲೀಸರು ವಿಫಲರಾಗಿದ್ದಾರೆ.

ತನಿಖೆಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಹೊಸ ಸರಕಾರ ಇನ್ನೇನು ಮಾಡಲಿದೆ ಎಂದು ಪೆರುಂಬಾವೂರಿನ ಜನತೆ ಕಾದಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ತನಿಖೆ ತಂಡ ರಚಿಸುವುದು, ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ಇಂತಹ ಹೊಸದಾರಿಗಳು ಸರಕಾರ ಮುಂದಿದೆ.

ಆದರೆ ಇದನ್ನು ಜಾರಿಗೆ ತಂದರೂ ಜಿಶಾ ಕೊಲೆಗಾರ ಯಾರು ಎಂಬುದಕ್ಕೆ ಉತ್ತರಿಸಲೇ ಬೇಕಾಗುತ್ತದೆ. ತನಿಖೆಗೆ ಸಹಕಾರಿಯಾದ ಪುರಾವೆಗಳು ಉಳಿದಿಲ್ಲ. ಆದ್ದರಿಂದ ಹಂತಕನ್ನು ಪತ್ತೇಹಚ್ಚಿ ತೀರುತ್ತೇವೆ ಎಂದು ಪೊಲೀಸರಿಗೂಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ.

ಚುನಾವಣಾ ಕಾಲದಲ್ಲಿ ಸಂಭವಿಸಿದ್ದ ಕೊಲೆಯನ್ನು ಭೇದಿಸಬೇಕೆಂದು ಪೊಲೀಸರು ಭಾರೀ ಒತ್ತಡ ಅನುಭವಿಸಿದ್ದರು. ಸೇನೆಯ ಉನ್ನತ ಅಧಿಕಾರಿಗಳ ಎಲ್ಲ ರೀತಿಯ ಸೇವೆಯನ್ನೂ ಗೃಹ ಖಾತೆ ಬಳಸಿಕೊಂಡಿತ್ತು. ನಿದ್ರಿಸಲೂ ಪುರುಸೊತ್ತಿಲ್ಲದ ತನಿಖಾ ವಿಧಾನವನ್ನು ಅನುಸರಿಸಲಾಯಿತು.

ಕೊನೆಗೆ ನಿರೀಕ್ಷೆಗಳೆಲ್ಲವೂ ಕಮರಿದಾಗ ಪೊಲೀಸರು ತನಿಖೆಯನ್ನು ಸ್ವಲ್ಪಮಟ್ಟಿಗೆ ನಿಧಾನಗೊಳಿಸಿದ್ದರು. ಹೊಸಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ಕಾದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News