ದೇಶದಲ್ಲಿ ಅರ್ಧದಷ್ಟು ಬಾಲಕಿಯರ ಕಳ್ಳ ಸಾಗಣೆ ಪಶ್ಚಿಮ ಬಂಗಾಳದಲ್ಲಿ: ವರದಿ

Update: 2016-05-24 16:50 GMT

ಕೋಲ್ಕತಾ, ಮೇ 24: ಭಾರತದಲ್ಲಿ ಅಪ್ರಾಪ್ತ ವಯಸ್ಕ ಹುಡುಗಿಯರ ಶೇ.42ರಷ್ಟು ಕಳ್ಳ ಸಾಗಣೆ ಪಶ್ಚಿಮ ಬಂಗಾಳದಿಂದ ನಡೆಯುತ್ತಿದೆಯೆಂದು ಇಂದು ಬಿಡುಗಡೆಯಾಗಿರುವ ವರದಿಯೊಂದು ತಿಳಿಸಿದೆ.
ಚೈಲ್ಡ್ ರೈಟ್ಸ್ ಆ್ಯಂಡ್ ಯು (ಕ್ರೈ) ಸರಕಾರೇತರ ಸಂಘಟನೆಯು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) 2014ರ ಅಂಕಿ-ಅಂಶವನ್ನು ವಿಶ್ಲೇಷಿಸಿದ್ದು, ದೇಶಾದ್ಯಂತ ಅಪ್ರಾಪ್ತ ವಯಸ್ಕ ಬಾಲಕಿಯರ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ.75ರಷ್ಟು ಕೇವಲ 4 ರಾಜ್ಯಗಳಲ್ಲಿ ಸಾಂದ್ರಗೊಂಡಿವೆಯೆಂಬುದನ್ನು ಪತ್ತೆ ಮಾಡಿದೆ.
ಪಶ್ಚಿಮ ಬಂಗಾಳವು ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದ್ದು, ಅಲ್ಲಿ ಶೇ.42ರಷ್ಟು ಬಾಲಕಿಯರ ಖರೀದಿ ಪ್ರಕರಣಗಳು ದಾಖಲಾಗಿವೆ. ಅಸ್ಸಾಂ, ಬಿಹಾರ ಹಾಗೂ ಒಡಿಶಾ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ರಾಜ್ಯಗಳಾಗಿವೆ.
ಹರ್ಯಾಣದಲ್ಲಿ ಇದರ ಪಾಲು ಶೇ.14ರಷ್ಟಿದೆ.
ಈ 5 ರಾಜ್ಯಗಳು ಭಾರತದ ಶೇ.97ರಷ್ಟು ಹೆಣ್ಣು ಮಕ್ಕಳ ಸಾಗಣೆಯ ಪಾಲು ಪಡೆದಿವೆಯೆಂದು ಕ್ರೈಯ ವಿಶ್ಲೇಷಣೆ ತಿಳಿಸಿದೆ.
2014ರಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಶೇ.70ರಷ್ಟು ಹೆಣ್ಣು ಮಕ್ಕಳೆಂದು ಅಂಕಿ-ಅಂಶ ತೋರಿಸುತ್ತಿದೆ.
ಮಕ್ಕಳ ಅಪಹರಣ ಹಾಗೂ ಕಳ್ಳತನಗಳಲ್ಲಿ ಪಶ್ಚಿಮ ಬಂಗಾಳದ ಪಾಲು ಶೇ.6ರಷ್ಟಿದೆ. ಕಳೆದ 5 ವರ್ಷಗಳಲ್ಲಿ ಇಂತಹ ಪ್ರಕರಣಗಳು ಶೇ.606ರಷ್ಟು ಬೆಳವಣಿಗೆ ಕಂಡಿವೆಯೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News