ಅಕ್ಬರ್ ರಸ್ತೆ ಹೆಸರು ಬದಲಾವಣೆ ಸರಿಯಲ್ಲ : ಸದ್ಗುರು ಜಗ್ಗಿ ವಾಸುದೇವ್

Update: 2016-05-25 03:34 GMT

ಹೊಸದಿಲ್ಲಿ, ಮೇ 25: ಔರಂಗಜೇಬ್ ರಸ್ತೆಯ ಹೆಸರನ್ನು ಡಾ. ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದ ಬಳಿಕ ಇದೀಗ ಅಕ್ಬರ್ ರಸ್ತೆಯ ಹೆಸರು ಬದಲಾವಣೆಗೆ ಮುಂದಾಗಿರುವ ಕ್ರಮವನ್ನು ಸದ್ಗುರು ಆಧ್ಯಾತ್ಮಿಕ ಮುಖಂಡ ಜಗ್ಗಿ ವಾಸುದೇವ್ ಕಟುವಾಗಿ ಟೀಕಿಸಿದ್ದಾರೆ.

ಅಕ್ಬರ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಆದ್ದರಿಂದ ಅವರ ಹೆಸರಿನ ರಸ್ತೆಗೆ ಮರುನಾಮಕರಣ ಮಾಡುವುದು ಸರಿಯಲ್ಲ ಎಂದು ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಔರಂಗಜೇಬ್ ರಸ್ತೆಯ ಹೆಸರು ಅಳಿಸಿಹಾಕಿ ಮರುನಾಮಕರಣ ಮಾಡಿದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದು, ಇಸ್ರೇಲ್ ಪಾಲಿಗೆ ಹಿಟ್ಲರ್ ಹೇಗಿದ್ದರೋ ಭಾರತದ ಪಾಲಿಗೆ ಔರಂಗಜೇಬ್ ಕೂಡಾ ಹಾಗೆಯೇ ಇದ್ದರು ಎಂದು ವಿಶ್ಲೇಷಿಸಿದ್ದಾರೆ.

ಸಶಸ್ತ್ರ ತರಬೇತಿ ನೀಡುವ ಮತ್ತು ಸ್ಕಲ್ ಕ್ಯಾಪ್ ಧರಿಸಿದವರನ್ನು ವಿರೋಧಿಗಳೆಂದು ಬಿಂಬಿಸಿದ ಬಜರಂಗದಳ ವಿಡಿಯೊ ಬಗ್ಗೆ ಗಮನ ಸೆಳೆದಾಗ, ಎಲ್ಲ ದೇಶಗಳಲ್ಲೂ ಇಂಥ ಕುಚೋದ್ಯದ ಪ್ರಕರಣಗಳು ಇರುತ್ತವೆ. ಅದನ್ನು ನಿರ್ಲಕ್ಷಿಸಬೇಕು ಎಂದು ಹೇಳಿದ್ದಾರೆ.

ಹಿಂದೂ ಎನ್ನುವುದು ಒಂದು ಧರ್ಮವಲ್ಲ. ಹಿಂದೂ ಎನ್ನುವುದು ಭೌಗೋಳಿಕ ಗುರುತಿಸಿಕೊಳ್ಳುವಿಕೆ. ಯಾವುದೇ ನಂಬಿಕೆ ಹೊಂದಿದ್ದರೂ ಈ ಭೂ ಭಾಗದಲ್ಲಿ ಜನಿಸಿದ ಎಲ್ಲರೂ ಹಿಂದೂಗಳು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News