ಮುಸ್ಲಿಮರಿಗೆ ಬಾಡಿಗೆ ಮನೆ ಇಲ್ಲ : ಈ ವಿಷಯದಲ್ಲಿ ದಿಲ್ಲಿಗಿಂತ ಮುಂಬೈ ಭಿನ್ನವಲ್ಲ

Update: 2016-05-25 09:20 GMT

ಮುಂಬೈ : ರಾಷ್ಟ್ರದ ರಾಜಧಾನಿ ದಿಲ್ಲಿ, ಗುರ್ಗಾಂವ್ ಹಾಗೂ ನೊಯ್ಡದಲ್ಲಿ ಮುಸ್ಲಿಮರಿಗೆ ಮನೆ ಬಾಡಿಗೆಗೆ ಸಿಗುವುದುಬಹಳ ಕಷ್ಟವೆಂಬ ಅಂಶವನ್ನು ಕಳೆದ ವಾರ ಬಿಡುಗಡೆಯಾದ ವಿಶ್ವ ಸಂಸ್ಥೆಯ ಅಧ್ಯಯನ ವರದಿಯೊಂದು ದೃಢಪಡಿಸಿತ್ತು. ಆದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಮುಸ್ಲಿಮರು ಈ ಸಮಸ್ಯೆ ಎದುರಿಸುತ್ತಿರುವುದು ಇಂದು ನಿನ್ನೆಯಲ್ಲವೆಂಬುದು ಮುಂಬೈ ನಿವಾಸಿಗಳುಹೇಳುವ ಮಾತು.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಹಾಗೂ ಕೆಲವು ‘ಸಸ್ಯಾಹಾರಿಗಳಿಗೆ ಮಾತ್ರ’ ವಸತಿ ಸಮುಚ್ಛಯಗಳಲ್ಲಿಮುಸ್ಲಿಮರಿಗೆ ಬಾಡಿಗೆಗೆ ಮನೆ ನಿರಾಕರಿಸಿದ ವಿಷಯಗಳು ಆಗೀಗ ಸುದ್ದಿಯಾಗುತ್ತಲೇ ಇವೆ. ನಮ್ಮ ಕಿಟಿಕಿಗಳಲ್ಲಿ ಗ್ರಿಲ್ ಹಾಗೂ ಫುಟ್ಪಾತಿನಲ್ಲಿ ಕಾರುಗಳನ್ನು ನಿಲ್ಲಿಸುವುದು ಎಷ್ಟು ಸಾಮಾನ್ಯವಾಗಿ ಬಿಟ್ಟಿದೆಯೋ ಅಷ್ಟೇ ಸಾಮಾನ್ಯ ಈ ಸಮಸ್ಯೆಯೂ ಆಗಿ ಬಿಟ್ಟಿದೆ.


ಕೆಲವೆಡೆ ಮನೆ ಮಾಲಿಕರು ‘‘ಕ್ಷಮಿಸಿ ಮುಸ್ಲಿಮರಿಗೆ ಮನೆ ಬಾಡಿಗೆಗೆ ನೀಡಲಾಗುವುದಿಲ್ಲ’’ ಎಂದು ಮೂಗಿನ ನೇರಕ್ಕೇ ಹೇಳುತ್ತಾರೆ. ಹಲವಾರು ಬಾರಿ ಮುಸ್ಲಿಮರಿಗೆ ಬಾಡಿಗೆ ಮನೆ ಸಿಕ್ಕಿದರೂ ಆ ಮನೆಯ ಬಾಗಿಲು ಅಥವಾ ಕಿಟಿಕಿ ತೆರೆದರೆಯಾವುದೋ ಅರ್ಧ ನಿರ್ಮಿತ ಕಟ್ಟಡ ಕಾಣಿಸುತ್ತದೆ ಇಲ್ಲವೇಮನೆಗೆ ಬರುವ ಹಾದಿಯಲ್ಲಿ ಕಲ್ಲುಗಳ ರಾಶಿಅಥವಾ ಕಬ್ಬಿಣದ ಶೀಟುಗಳನ್ನು ದಾಟಿಯೇ ಬರಬೇಕಾಗುತ್ತದೆ. ಅಲ್ಲಿ ಎಲ್ಲವೂ ಅರೆಕಾಲಿಕ, ಒಪ್ಪಂದ, ಕಾಂಟ್ರಾಕ್ಟ್ ಹಾಗೂ 11 ತಿಂಗಳಿಗೊಮ್ಮೆ ನಿಗದಿಯಾದ ಬಾಡಿಗೆ ಕೂಡ.


ಮೇಲಾಗಿ ಹಲವಾರು ಮನೆ ಮಾಲಿಕರು ಅವಿವಾಹಿತ ಸ್ತ್ರೀ, ಪುರುಷರಿಗೆ ಮನೆ ಬಾಡಿಗೆಗೆ ನೀಡಲು ಮನಸ್ಸು ಮಾಡುವುದಿಲ್ಲ. ಕೆಲವರು ಇದನ್ನು ವಿರೋಧಿಸಿದ್ದರೂ ಅದು ಅನ್ಯಾಯವೆಂಬ ಕಾರಣಕ್ಕಾಗಿರದೆಅವರು ವಿದೇಶದಲ್ಲಿದ್ದು ಇಲ್ಲಿನ ಮನೆಯನ್ನು ಯಾರಿಗೆ ಬೇಕಾದರೂ ಬಾಡಿಗೆಗೆ ನೀಡಲು ತಯಾರಿರುವವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News