ಕೇರಳ: ಜೆಡಿಎಸ್‌ಗೆ ನೀರಾವರಿ, ಎನ್‌ಸಿಪಿಗೆ ಸಾರಿಗೆ,ಕಾಂಗ್ರೆಸ್ ಎಸ್‌ಗೆ ಬಂದರು ಖಾತೆ
ತಿರುವನಂತಪುರಂ, ಮೇ 25: ಎಲ್‌ಡಿಎಫ್‌ನ ಮೂರು ಘಟಕ ಪಕ್ಷಗಳ ಖಾತೆಗಳು ನಿರ್ಧಾರವಾಗಿದೆ. ಜನತಾದಳ ಎಸ್‌ಗೆ ನೀರಾವರಿ, ಕಾಂಗ್ರೆಸ್ ಎಸ್‌ಗೆ ಬಂದರು, ಮ್ಯೂಸಿಯಂ, ಮೃಗಾಲಯ, ಎನ್‌ಸಿಪಿಗೆ ಸಾರಿಗೆ ಖಾತೆ ನೀಡಲು ನಿರ್ಧರಿಸಲಾಗಿದೆ. ಎಕೆಜಿ ಸೆಂಟರ್‌ನಲ್ಲಿ ನಡೆದ ಚರ್ಚೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ವಿ.ಎಸ್. ಅಚ್ಯುತಾನಂದನ್ ಸರಕಾರದಲ್ಲಿ ಆರ್‌ಸಿಪಿ ನೀರಾವರಿ ಇಲಾಖೆಯನ್ನು ನಿರ್ವಹಿಸಿತ್ತು. ಕಾಂಗ್ರೆಸ್ ಎಸ್ ಮುಜರಾಯಿ ಖಾತೆ, ಚಿಲ್ಲರೆ ಮಾರುಕಟ್ಟೆ ಖಾತೆಯನ್ನು ವಹಿಸಿಕೊಂಡಿದ್ದರೆ ಜೆಡಿಎಸ್ ಕೈಯಲ್ಲಿ ಸಾರಿಗೆ ಖಾತೆ ಇತ್ತು.
ಸಿಪಿಐಗೆ ರೆವೆನ್ಯೂ, ಅರಣ್ಯ-ಪರಿಸರ,ಆಹಾರ-ಸಾರ್ವಜನಿಕ ವಿತರಣೆ, ಕೃಷಿ ಎಂಬ ಖಾತೆಗಳು ಲಭಿಸಲಿದೆ. ವಿಎಸ್ ಸರಕಾರದಲ್ಲಿ ಕೆಪಿ ರಾಜೇಂದ್ರನ್ ರೆವೆನ್ಯೂ, ಬಿನಾಯ್ ವಿಶ್ವಂ ಅರಣ್ಯ-ಪರಿಸರ, ಸಿ.ದಿವಾಕರನ್ ಆಹಾರ-ಸಾರ್ವಜನಿಕ ವಿತರಣೆ, ಮುಲ್ಲಕರ ರತ್ನಾಕರನ್ ಕೃಷಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಸಿಪಿಎಂನಲ್ಲಿ ಡಾ.ಥಾಮಸ್ ಐಸಾಕ್-ಹಣಕಾಸು, ಕೆಕೆ ಶೈಲಜಾ-ಆರೋಗ್ಯ, ಎಕೆ ಬಾಲನ್_ಸ್ವಯಮಾಡಳಿತ, ಟಿವಿ ರಾಮಕೃಷ್ಣನ್-ಅಬಕಾರಿ,ಜಿ.ಸುಧಾಕರನ್ ಪಿಡಬ್ಲೂಡಿ, ಫ್ರೊ.ಸಿ.ರವೀಂದ್ರನಾಥ್-ಶಿಕ್ಷಣ,ಜೆ.ಮರ್ಸಿಕುಟ್ಟಿಯಮ್ಮ- ಮೀನುಗಾರಿಕೆ.ಕಡಕಂಪಳ್ಲಿ ಸುರೇಂದ್ರನ್-ಇಂಧನ,ಎಸಿ ಮೊಯ್ದಿನ್ ಸಹಕಾರಿ, ಡಾ.ಕೆಟಿಜಲೀಲ್-ಪ್ರವಾಸೋದ್ಯಮ ಸಚಿವರಾಗಲಿದ್ದಾರೆ.