ಜೆ ಎನ್ ಯು ನಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತದೆ !

Update: 2016-05-25 12:39 GMT

ಜೈಪುರ್ , ಮೇ 25 : ರಾಜಸ್ಥಾನದ ವಿವಾದಾತ್ಮಕ ಹೇಳಿಕೆಗಳ ಕುಖ್ಯಾತಿಯ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜ ಮತ್ತೊಂದು ಅದೇ ಧಾಟಿಯ ಹೇಳಿಕೆ ನೀಡಿದ್ದಾರೆ. ಈಗ ಅವರು " ಜೆ ಎನ್ ಯು ನಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತದೆ. ಅದು ಅಪರಾಧ ಕೃತ್ಯಗಳ ಕೇಂದ್ರವಾಗಿದೆ " ಎಂದು ಅವರು ಹೇಳಿದ್ದಾರೆ.

" ಜೆ ಎನ್ ಯು ನಲ್ಲಿ 50,000 ಮೂಳೆಗಳು ,3,000 ಬಳಸಿದ ಕಾಂಡೋಮ್ ಗಳು , 500 ಗರ್ಭ ನಿರೋಧಕ ಚುಚ್ಚುಮದ್ದುಗಳು ಹಾಗು  10,000 ಸಿಗರೇಟು ತುಂಡುಗಳು ಪ್ರತಿದಿನ ಸಿಗುತ್ತವೆ ಹಾಗು ಕಾರ್ಯಕ್ರಮಗಳ ಸಂದರ್ಭ ವಿದ್ಯಾರ್ಥಿಗಳು ನಗ್ನವಾಗಿ ನರ್ತಿಸುತ್ತಾರೆ " ಎಂದು ಹೇಳಿಕೆ ನೀಡಿ ಅಲ್ವಾರ್ ನ ಈ ಶಾಸಕ ನಗೆಪಾಟಲಿ ಗೀಡಾಗಿದ್ದರು. ಆ ಹೇಳಿಕೆಯನ್ನು ಈಗ ಮತ್ತೆ ಅವರು ಸಮರ್ಥಿಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News