‘ಅಂಗವಿಕಲರನ್ನು ದಿವ್ಯಾಂಗರೆನ್ನದಿರಿ’

Update: 2016-05-25 18:18 GMT

ಹೊಸದಿಲ್ಲಿ, ಮೇ 25: ಅಂಗವಿಕಲರನ್ನು ‘ದಿವ್ಯಾಂಗರೆಂದು’ ಸಂಬೋಧಿಸುವುದಕ್ಕೆ ಆಕ್ಷೇಪ ಸೂಚಿಸಿರುವ ಅಂಗವಿಕಲರ ಹಕ್ಕುಗಳ ಗುಂಪೊಂದು, ಅಂಗವಿಕಲರನ್ನು ಅಂಗವಿಕಲ ಸಬಲೀಕರಣ ಇಲಾಖೆಯು ಹಿಂದಿಯಲ್ಲಿ ‘ವಿಕಲಾಂಗ ಜನ್’ ಎನ್ನುವ ಬದಲು ‘ದಿವ್ಯಾಂಗ್ ಜನ್’ ಎಂದು ಕರೆಯುವಂತೆ ಹೊರಡಿಸಿರುವ ಅಧಿಸೂಚನೆಯನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದೆ.

ಇತ್ತೀಚಿನ ಸರಕಾರಿ ಆದೇಶವೊಂದರ ಪ್ರಕಾರ, ಅಂಗವಿಕಲರ ಸಬಲೀಕರಣ ಇಲಾಖೆಯನ್ನು ಹಿಂದಿಯಲ್ಲಿ ‘ದಿವ್ಯಾಂಗಜನ್ ಸಶಕ್ತೀಕರಣ ವಿಭಾಗ್’ ಎಂದು ಈಗ ಹೆಸರಿಸಲಾಗಿದ್ದು, ಹಿಂದಿನ ‘ವಿಕಲಾಂಗ್ ಜನ್’ ಎಂಬ ಶಬ್ದವನ್ನು ಕೈಬಿಡಲಾಗಿದೆ.
ಅಂಗವಿಕಲರ ಸಬಲೀಕರಣ ಇಲಾಖೆಗೆ ಹಿಂದಿಯಲ್ಲಿ ‘ದಿವ್ಯಾಂಗ್‌ಜನ್ ಸಶಕ್ತೀಕರಣವ ವಿಭಾಗ್’ ಎಂದು ಮರು ನಾಮಕರಣ ಮಾಡಿರುವುದನ್ನು ತಾವು ಮೇ 17ರ ಗಜೆಟ್ ಅಧಿಸೂಚನೆಯಲ್ಲಿ ಗಮನಿಸಿದ್ದೇವೆ. ಅಂಗವಿಕಲತೆ ದೇವರ ವರವಲ್ಲ. ದಿವ್ಯಾಂಗ ಶಬ್ದ ಬಳಕೆಯ ಅಂಗವಿಕಲರ ಕುರಿತು ತಾರತಮ್ಯವನ್ನು ಯಾವುದೇ ವಿಧದಲ್ಲಿ ಅಂತ್ಯಗೊಳಿಸದೆಂದು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಪತ್ರದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News