ಶಾಸಕರಿಂದ ಅಫಿದಾವಿತ್ ಮಾಡಿಸಿದ ಕಾಂಗ್ರೆಸ್ !ಕೊಲ್ಕತ್ತಾ

Update: 2016-05-25 18:33 GMT

ಮೇ 25: ಸ್ವಾರಸ್ಯಕರ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ವಿಧಾನಸಬೆಗೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ 44 ಕಾಂಗ್ರೆಸ್ ಶಾಸಕರು ಆಡಳಿತ ತೃಣಮೂಲ ಕಾಂಗ್ರೆಸ್ಸಿಗೆ ಪಕ್ಷಾಂತರಗೊಳ್ಳುವುದನ್ನು ತಡೆಯಲು ಅವರೆಲ್ಲರೂ ಅಫಿದಾವಿಟ್ ಒಂದಕ್ಕೆ ಸಹಿ ಹಾಕುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಹ್ರಾಂಪುರ ಸಂಸದ ಅಧೀರ್ ಚೌಧುರಿ ಆದೇಶಿಸಿದ್ದಾರೆ.
ಬಂಗಾಳ ವಿಧಾನಸಬೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನವನ್ನು ಅಲಂಕರಿಸಲಿದ್ದರೆ,‘ಮಮತಾ ಸುನಾಮಿ’ಯ ಪ್ರಭಾವದಿಂದ ಸಿಪಿಎಂ ಮೂರನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಈ ಹಿಂದೆ 42 ಸೀಟುಗಳನ್ನು ಹೊಂದಿದ್ದರೆ ಈ ಬಾರಿ ಇನ್ನೂ ಎರಡು ಹೆಚ್ಚು ಸೀಟುಗಳನ್ನುಗೆದ್ದಿದ್ದು ಪಕ್ಷದ ಮತ ಹಂಚಿಕೆ ಕೂಡ ಹಿಂದಿನ 9.6 ಶೇ.ದಿಂದ 12 ಶೇಕಡಕ್ಕೇರಿದೆ. ಇದು ಸಂತಸ ಪಡುವ ವಿಷಯವಾದರೂ ಆಯ್ಕೆಗೊಂಡ ಪಕ್ಷ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ದೊಡ್ಡ ಸವಾಲನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧುರಿ ಎದುರಿಸುತ್ತಿದ್ದು ಅದಕ್ಕೆ ಅವರು ಕಂಡುಕೊಂಡ ಪರಿಹಾರವೇ ಶಾಸಕರು ಅಫಿದಾವಿತ್‌ಗೆ ಸಹಿ ಹಾಕುವಂತೆ ಮಾಡುವುದು. ಹಿಂದೊಮ್ಮೆ ತೃಣಮೂಲ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ 2012ರಲ್ಲಿ ಒಡಕುಂಟಾದಾಗ ನಡೆದಂತೆ ಈ ಬಾರಿಯೂ ನಡೆಯಬಹುದೆಂಬ ಯ ಅವರಲ್ಲಿದೆ.
ನೂರು ರುಪಾಯಿ ವೌಲ್ಯದ ಸ್ಟಾಂಪ್ ಪೇಪರ್‌ನಲ್ಲಿ ಎಲ್ಲಾ ಶಾಸಕರು ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ಆಡಳಿತ ತೃಣಮೂಲ ಕಾಂಗ್ರೆಸ್ಸಿಗೆ ಪಕ್ಷಾಂತರಗೈಯ್ಯುವುದಿಲ್ಲವೆಂದು ಘೋಷಣಾ ಪತ್ರಕ್ಕೆ ಸಹಿ ಹಾಕಿಸಲು ಅವರು ನಿರ್ಧರಿಸಿದ್ದಾರೆ.
ಸೋಮವಾರದಂದು ಚೌಧುರಿ ಪಶ್ಚಿಮ ಬಂಗಾಳ ರಾಜ್ಯಪಾಲ ಕೆ ಎನ್ ತ್ರಿಪಾಠಿಯವರನ್ನು ಸಂಪರ್ಕಿಸಿ ಬಂಗಾಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚುನಾವಣೋತ್ತರ ಹಿಂಸೆಯ ವಿರುದ್ಧ ದೂರಿದ್ದಾರೆ. ಮುಂದಿನ ವರ್ಷದ ಪಂಚಾಯತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ತೃಣಮೂಲ ಕಾಂಗ್ರೆಸ್‌ವಿರುದ್ಧ ಅಭಿಯಾನಕ್ಕೂ ಅಣಿಯಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News