ರಾಜಧಾನಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ, ಏರ್ ಇಂಡಿಯಾದಲ್ಲಿ ಪ್ರಯಾಣಿಸಿ !

Update: 2016-05-26 07:10 GMT

ನವದೆಹಲಿ, ಮೇ 26: ರಾಜಧಾನಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ವೇಟಿಂಗ್ ಲಿಸ್ಟಿನಲ್ಲಿರುವರ ಪಾಲಿಗೆ ಏರ್ ಇಂಡಿಯಾ ಮಹಾರಾಜ ಆಪತ್ಭಾಂಧವನಾಗಲಿದ್ದಾನೆ. ಇಂತಹ ಪ್ರಯಾಣಿಕರು ಸ್ವಲ್ಪ ಹೆಚ್ಚು ಹಣ ಪಾವತಿಸಿದಲ್ಲಿ ಅವರು ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಹುದು.

ಏರ್ ಇಂಡಿಯಾ ಮತ್ತು ಐಆರ್‌ಸಿಟಿಸಿ ಈ ಬಗ್ಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ಈ ಯೋಜನೆ ಇನ್ನೊಂದು ವಾರದಲ್ಲಿ ಜಾರಿಯಾಗಲಿದೆಯೆಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೊಹಾನಿ ತಿಳಿಸಿದ್ದಾರೆ.
ರಾಜಧಾನಿ ರೈಲು ಪ್ರಯಾಣಿಕರ ಹೆಸರು ವೇಟಿಂಗ್ ಲಿಸ್ಟಿನಲ್ಲಿದ್ದಲ್ಲಿ, ಅವರು ಪ್ರಯಾಣಿಸಬೇಕೆಂದಿದ್ದ ಊರಿಗೆ ಏರ್ ಇಂಡಿಯಾ ವಿಮಾನ ಸೌಲಭ್ಯವಿದ್ದಲ್ಲಿಹಾಗೂ ಸ್ವಲ್ಪ ಹೆಚ್ಚು ಪಾವತಿಸಲು ಅವರು ತಯಾರಿದ್ದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ದೊರೆಯುವುದು. ಆದೆ ರಾಜಧಾನಿ ರೈಲುಗಳ ಎಸಿ ಮೊದಲನೆ ದರ್ಜೆ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಲು ಹೆಚ್ಚಿನ ಮೊತ್ತ ಪಾವತಿಸಬೇಕಾಗಿರುವುದಿಲ್ಲ.ಆದರೆ ಎರಡನೆ ಮತ್ತು 3ನೆ ಎಸಿ ಪ್ರಯಾಣಿಕರು ಪ್ರತಿ ಟಿಕೆಟಿಗೆ ರೂ. 2,000 ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ಇಂತಹ ಪ್ರಯಾಣಿಕರಿಗೆ ಟಿಕೆಟ್ಗಳನ್ನು ಐಆರ್‌ಸಿಟಿಸಿ ಮುಖಾಂತರ ನೀಡಲಾಗುವುದು.
ಇಂತಹ ಒಂದು ಕ್ರಮದಿಂದ ಏರ್ ಇಂಡಿಯಾಗೆ ಹೆಚ್ಚಿನ ಸೀಟುಗಳನ್ನು ತುಂಬಿಸಲು ಸಾಧ್ಯವಾಗುವುದು.
ತರುವಾಯ ಹೆಚ್ಚಿನ ರಾಜ್ಯಗಳಲ್ಲಿ ಸಣ್ಣ ವಿಮಾನಗಳ ಸೇವೆಗಳನ್ನು ಒದಗಿಸುವ ಬಗ್ಗೆಯೂ ಏರ್ ಇಂಡಿಯಾ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಏರ್ ಇಂಡಿಯಾ ಪ್ರಾಯೋಜಿತ ಅದರ ಅಂಗಸಂಸ್ಥೆಏರ್ ಅಲಾಯನ್ಸ್ತನ್ನಲ್ಲಿರುವ ಎಟಿಆರ್ ಸಂಖ್ಯೆಯನ್ನುಮುಂದಿನ ನಾಲ್ಕು ವರ್ಷಗಳಲ್ಲಿ 35ಕ್ಕೆ ಏರಿಸಲಿದೆ. ಪ್ರಸಕ್ತ ಏರ್ ಅಲಾಂನ್ಸ್ ಬಳಿ 7 ಎಟಿಆರ್ಗಳಿವೆ. ಮಾರ್ಚ್ 2017ರ ಒಳಗಾಗಿ ತನ್ನಲ್ಲಿರುವ ಎಟಿಆರ್-72 ವಿಮಾನಗಳ ಸಂಖ್ಯೆಯನ್ನು 18ಕ್ಕೆ ಏರಿಸಲು ಅದು ಯೋಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News