ತ್ರಿಪುರ ಪಠ್ಯದಲ್ಲಿ ಕಾರ್ಲ್‌ಮಾರ್ಕ್ಸ್‌ಗೆ ಜೈ, ಮಹಾತ್ಮಾ ಗಾಂಧೀಜಿಗೆ ಗುಡ್‌ಬೈ

Update: 2016-05-26 18:05 GMT

ಅಗರ್ತಲ, ಮೇ 26: ರಾಜಸ್ಥಾನದ ಪಠ್ಯವನ್ನು ಪರಿಷ್ಕರಿಸಿದ ರಾಜ್ಯ ಸರಕಾರದ ನಿರ್ಧಾರ ವಿವಾದಕ್ಕೆ ಈಡಾಗಿರುವ ಬೆನ್ನಲ್ಲೇ ತ್ರಿಪುರಾದಲ್ಲಿ ಕಮ್ಯುನಿಸ್ಟ್ ಸರಕಾರ ಇಂಥದ್ದೇ ನಿರ್ಧಾರಕ್ಕೆ ಮುಂದಾಗಿದೆ. ರಾಜ್ಯದ ಒಂಬತ್ತನೆ ತರಗತಿ ಪಠ್ಯದಿಂದ ಗಾಂಧೀಜಿಯವರ ಕುರಿತ ಪಾಠವನ್ನು ಕಿತ್ತುಹಾಕಲು ತ್ರಿಪುರಾ ಸೆಕೆಂಡರಿ ಶಾಲಾ ಶಿಕ್ಷಣ ಮಂಡಳಿ ನಿರ್ಧರಿಸಿದೆ.

ಅಂತೆಯೇ ಆಡಳಿತಾರೂಢ ಎಡಪಕ್ಷ ಕಾರ್ಲ್ ಮಾರ್ಕ್ಸ್ ಅವರನ್ನು ವೈಭವೀಕರಿಸಿದೆ. ಜತೆಗೆ ಸೋವಿಯತ್ ಕ್ರಾಂತಿ, ಫ್ರಾನ್ಸ್ ಕ್ರಾಂತಿ, ಕ್ರಿಕೆಟ್ ಹುಟ್ಟು ಮತ್ತಿತರ ವಿಷಯಗಳಿಗೆ ಅನಗತ್ಯ ಪ್ರಾಮುಖ್ಯ ನೀಡಲು ಮುಂದಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ವಹಿಸಿದ ಪಾತ್ರದ ಬಗೆಗಿನ ಪಠ್ಯವನ್ನು ಕಿತ್ತುಹಾಕಲು ನಿರ್ಧರಿಸಿದೆ ಎಂದು ತ್ರಿಪುರಾ ಇತಿಹಾಸ ಸೊಸೈಟಿ ಸದಸ್ಯ ಸಂತೋಷ್ ಸಹಾ ಹೇಳಿದ್ದಾರೆ.
ಆದರೆ ಎನ್‌ಸಿಇಆರ್‌ಟಿ ಮಾರ್ಗದರ್ಶನದಲ್ಲೇ ಪಠ್ಯ ಪರಿಷ್ಕರಣೆಗೆ ಟಿಬಿಎಸ್‌ಇ ನಿರ್ಧರಿಸಿದೆ ಎಂದು ಅಧ್ಯಕ್ಷ ಮಿಹಿರ್‌ದೇವ್ ಸಮರ್ಥಿಸಿಕೊಂಡಿದ್ದಾರೆ. ಯಾವ ಪಠ್ಯವನ್ನು ಕಿತ್ತುಹಾಕಲೂ ಇಲ್ಲ ಹಾಗೂ ಸೇರಿಸಲೂ ಇಲ್ಲ. ಪಠ್ಯದಲ್ಲಿ ಇರುವ ತಪ್ಪುಗಳನ್ನು ಮಾತ್ರ ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ರಾಣಿ ಲಕ್ಷ್ಮೀಬಾಯಿ ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕುರಿತ ಪಠ್ಯಗಳನ್ನು ಕಿತ್ತುಹಾಕಲಾಗಿದೆ ಎಂದು ಇತಿಹಾಸ ತಜ್ಞ ಸುಭಾಶಿಶ್ ಚೌಧರಿ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News