ಪೂವರಣಿ ಬಾಲಕಿ ಅತ್ಯಾಚಾರ ಪ್ರಕರಣ: ಒಂದನೆ ಆರೋಪಿಗೆ 25ವರ್ಷ ಕಠಿಣ ಶಿಕ್ಷೆ, 4ಲಕ್ಷ ರೂ. ದಂಡ

Update: 2016-05-27 10:37 GMT

ಕೋಟ್ಟಯಂ,ಮೇ 27: ಪೂವರಣಿ ಎಂಬಲ್ಲಿನ ಎಂಟನೆ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಕೇರಳದ ವಿವಿಧ ಭಾಗಗಳಿಗೆ ಕರೆದೊಯ್ದು ಅತ್ಯಾಚಾರ ವೆಸಗಿದ ಪ್ರಕರಣದಲ್ಲಿ ಮುಖ್ಯ ಆರೋಪಿಗೆ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಕೋಟ್ಟಯಂ ಒಂದನೆ ಅಡಿಷನಲ್ ಸೆಷನ್ಸ್ ಕೋರ್ಟ್(ವಿಶೇಷ) ಜಡ್ಜ್ ಕೆ.ಬಾಬು ತೀರ್ಪು ನೀಡಿದ್ದಾರೆ. ಒಂದನೆ ಆರೋಪಿ ಲಿಸಿ ಟೋಮಿ ಎಂಬ ಮಹಿಳೆಗೆ ವಿವಿಧ ಕಲಂಗಳ ಪ್ರಕಾರ 25ವರ್ಷ ಕಠಿಣ ಶಿಕ್ಷೆ ಮತ್ತು ನಾಲ್ಕು ಲಕ್ಷರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದ್ದು, 366 ಐ, 372,373 ಕಲಂ ಪ್ರಕಾರ 21ವರ್ಷ ಶಿಕ್ಷೆಹಾಗೂ ಕಲಂ 120 ಬಿ ಪ್ರಕಾರ ನಾಲ್ಕು ವರ್ಷದ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ತಪ್ಪಿತಸ್ಥೆ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಹುದು. ಆದ್ದರಿಂದ ಏಳು ವರ್ಷ ಜೈಲಿನೊಳಗೆ ಇದ್ದರೆ ಸಾಲುತ್ತದೆ.

ಎರಡನೆ,ಮೂರನೆ ಮತ್ತು ಐದನೆ ಆರೋಪಿಗಳಿಗೆ ಆರುವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ, ಪ್ರಕರಣದ ನಾಲ್ಕನೆ ಮತ್ತು ಆರನೆ ಆರೋಪಿಗೆ ನಾಲ್ಕುವರ್ಷ ಜೈಲು ಶಿಕ್ಷೆ ಮತ್ತು 25,000 ದಂಡವನ್ನು ವಿಧಿಸಿ ನ್ಯಾಯಾಧೀಶರು ತೀರ್ಪಿತ್ತಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಲಿಸಿ ಸಹಿತ ಆರು ಮಂದಿಯನ್ನು ಅಪರಾಧಿಗಳೆಂದು ಕೋರ್ಟ್ ನಿರ್ಧರಿಸಿತ್ತು. ಒಂದನೆ ಆರೋಪಿ ಲಿಸಿ ಟೋಮಿ(48) ಎರಡನೆ ಮತ್ತು ಮೂರನೆ ಆರೋಪಿಗಳಾದ ವೇಲತ್ತುಶ್ಶೇರಿ ವಡಕ್ಕಲ್ ವೀಟ್ಟಿ ಲ್ ಜೊಮಿನಿ(33) ಈಕೆಯ ಪತಿ ಜ್ಯೋತಿಷ್(35), ತಂಗಮಣಿ(48) ಕೊಲ್ಲಂ ತೃಕ್ಕರುವದ ಸತೀಶ್‌ಕುಮಾರ್(58), ತೃಶೂರ್ ಪಾರಕ್ಕಾಟ್ಟ್‌ನ ರಾಖಿ(33) ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ನಿನ್ನೆ ಕೋರ್ಟ್ ನಿರ್ಧರಿಸಿತ್ತು. ಇಂದು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಅದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News