ಕೇರಳಕ್ಕೆ 1,000 ಕೋಟಿ ರೂ. ಯೋಜನೆಗಳ ಕೊಡುಗೆ ಪ್ರಕಟಿಸಿದ ಕೇಂದ್ರ ಸರಕಾರ!

Update: 2016-05-27 11:14 GMT

ತಿರುವನಂತಪುರಂ, ಮೇ 27: ನರೇಂದ್ರ ಮೋದಿ ಸರಕಾರದ ಎರಡನೆ ವರ್ಷ ಪೂರ್ತಿಗೊಳಿಸಿದ ಸಂದರ್ಭದಲ್ಲಿ ಕೇರಳಕ್ಕೆ ಹಲವು ಕೊಡುಗೆಗಳನ್ನು ಕೇಂದ್ರಸರಕಾರ ಪ್ರಕಟಿಸಿದೆ. 1,000 ಕೋಟಿ ರೂ. ಯೋಜನೆಯನ್ನು ಮೋದಿ ಸರಕಾರ ಘೋಷಿಸಿದೆ.

ಹೊಸ ಐದು ಕೇಂದ್ರ ಸಂಸ್ಥೆಗಳ ಕೊಡುಗೆಯನ್ನು ಒಳಗೊಂಡಿರುವ ಯೋಜನೆಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ತಿರುವನಂತಪುರದಲ್ಲಿ ಇಂದು ಪ್ರಕಟಿಸಿದ್ದಾರೆ. ಪ್ಲಾಸ್ಟಿಕ್ ಪಾರ್ಕ್,ಕೇಂದ್ರ ರಸಗೊಬ್ಬರ ಖಾತೆಯ ಅಧೀನದಲ್ಲಿ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ಗೆ ಅನುಮತಿ ನೀಡಲಾಗುವುದು. ಐಐಟಿಗೆ ಸಮಾನವಾದ ಸಂಸ್ಥೆಗಳಿವು. 200ಜೆನ್ ಔಷಧ ಅಂಗಡಿಗಳು, ಫಾರ್ಮ್ ಪಾರ್ಕ್ ನೀಡಲು ಕೇಂದ್ರ ಸರಕಾರ ಸಿದ್ಧವೆಂದು ಅನಂತಕುಮಾರ್ ತಿಳಿಸಿದ್ದಾರೆ. ಯೋಜನೆಗೆ ಅಗತ್ಯ ಸ್ಥಳವನ್ನು ರಾಜ್ಯಸರಕಾರ ಒದಗಿಸಬೇಕೆಂದು ಕೇಂದ್ರ ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News