ಭಯೋತ್ಪಾದಕರು – ಭದ್ರತಾಪಡೆ ಘರ್ಷಣೆ: ಭಯೋತ್ಪಾದಕರಿಬ್ಬರ ಹತ್ಯೆ

Update: 2016-05-27 12:01 GMT

ಕಾಶ್ಮೀರ, ಮೇ 27: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ನಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಘರ್ಷಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ ಪ್ರಕಾರ ಬಾರಮುಲ್ಲಾದಿಂದ ಮೂವತ್ತೈದು ಕಿ.ಮೀ. ದೂರದಲ್ಲಿರುವ ತಂಗ್‌ಮಾರ್ಗ್‌ನ ಕಾಂಚಿಪುರ ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರು ಅಡಗಿ ಕೂತಿದ್ದರೆಂದು ಮಾಹಿತಿ ಮೇರೆಗೆ ಭದ್ರತಾ ಪಡೆ ಹುಡುಕಾಟ ಆರಂಭಿಸಿತ್ತು. ಆದ್ದರಿಂದ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು ಬೆಳಗ್ಗೆ ಆರೂವರೆ ಗಂಟೆ ವೇಳೆಗೆ ಈ ಘರ್ಷಣೆಯಲ್ಲಿ ಇಬ್ಬರು ಭದ್ರತಾ ಪಡೆಯ ಸೈನಿಕರು ಗಾಯಗೊಂಡಿದ್ದಾರೆ. ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಘರ್ಷಣೆ ನಡೆದ ಸ್ಥಳದಿಂದ ಭಾರೀ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾರ್ತಾಸಂಸ್ಥೆ ಎಎನ್‌ಐ ಇದಕ್ಕೆ ಸಂಬಂಧಿಸಿದ ಒಂದು ವೀಡಿಯೊವನ್ನು ಬಿಡುಗಡೆಗೊಳಿಸಿದ್ದು ಭದ್ರತಾಪಡೆಗಳು ಮನೆಯೊಂದನ್ನು ಸಂಪೂರ್ಣ ಧ್ವಂಸ ಮಾಡುವ ದೃಶ್ಯ ಅದರಲ್ಲಿದೆ. ಇದೇ ಮನೆಯಲ್ಲಿ ಭಯೋತ್ಪಾದಕರು ಅಡಗಿ ಕೂತಿದ್ದರೆನ್ನಲಾಗಿದೆ. ಆದರೆ ಭದ್ರತಾ ಕಾರಣಗಳಿಗಾಗಿ ವೀಡಿಯೊ ಎಂದಿನದ್ದೆಂದು ತಿಳಿಸಲಾಗಿಲ್ಲ. ಇತ್ತ ನೌಗಾಂವ್‌ನಲ್ಲಿ ಭದ್ರತಾ ಪಡೆ ನಾಲ್ವರು ಭಯೋತ್ಪಾದಕರನ್ನು ಸುತ್ತುವರಿದಿದೆ. ಈ ಘರ್ಷಣೆಯಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News