ಮೋದಿಯ ‘ಬೌದ್ಧ ದೂತ’ ಬೌದ್ಧ ಧರ್ಮಕ್ಕೆ ಅಪಚಾರ, ಬ್ರಾಹ್ಮಣ್ಯದ ಸಂಚು

Update: 2016-05-27 12:52 GMT

ಅಲಹಾಬಾದ್ ; ಪ್ರಧಾನಿ ನರೇಂದ್ರ ಮೋದಿಯವರ ದೂತ ತಾನೆಂದು ಹೇಳಿಕೊಂಡು ಉತ್ತರ ಪ್ರದೇಶದಾದ್ಯಂತ ಬೌದ್ಧ ಧರ್ಮೀಯರ ಗುಂಪೊಂದರೊಂದಿಗೆ ಪ್ರಯಾಣಿಸುತ್ತಿರುವ ಹಿರಿಯಬೌದ್ಧ ಬಿಕ್ಷುವೊಬ್ಬರ ಮುಖ್ಯ ಉದ್ದೇಶ 2017ರ ವಿಧಾನಸಭಾ ಚುನಾವಣೆಯ ಮುನ್ನ ರಾಜ್ಯದ ದಲಿತರನ್ನು ಓಲೈಸುವುದಾಗಿದೆಯಾದರೂ ಅವರ ಉದ್ದೇಶ ಈಡೇರಿಸುವುದು ಬಿಡಿ ಅವರು ತಮ್ಮ ಸಮುದಾಯದ ಮಂದಿಯ ಆಕ್ರೋಶಕ್ಕೇ ಒಳಗಾಗಿದ್ದಾರೆ.

ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳಾದ ಗಯಾ, ಸಾರನಾಥ್ ಹಾಗೂ ಕುಶಿನಗರದ ಕೆಲ ಹಿರಿಯ ಭಿಕ್ಷುಗಳು77 ವರ್ಷದ ಭಂತೆ ಧಮ್ಮ ವಿರಿಯೋಅವರನ್ನು‘ಪರಾಯ’ (ಹೊರಗಿನವ) ಎಂದು ಬಣ್ಣಸಿದ್ದಾರೆ. ಅವರ ಪ್ರಚಾರ ಬೌದ್ಧ ಧರ್ಮಕ್ಕೆ ಅಪಚಾರ ಹಾಗೂ ಬ್ರಾಹ್ಮಣ್ಯದ ಸಂಚು ಎಂದು ಈ ಭಿಕ್ಷುಗಳು ಬಣ್ಣಿಸಿದ್ದಾರಲ್ಲದೆ ‘‘ಅವರ ಅಭಿಯಾನ ಬೌದ್ಧ ಧರ್ಮಕ್ಕೆ ಅದರ ಹುಟ್ಟೂರಲ್ಲೇ ಕೆಟ್ಟ ಹೆಸರು ತರುತ್ತಿದೆ’’ಎಂದು ಹೇಳಿದ್ದಾರೆ.
ಧಮ್ಮ ವಿರಿಯೋ ಅವರ ನೇತೃತ್ವದ ಧಮ್ಮ ಚೇತನ ಯಾತ್ರೆಯು ಪ್ರಧಾನ ಮಂತ್ರಿಯವರ ಕಾರ್ಯಾಲಯದ ನೇರ ಸುಪರ್ದಿಯಲ್ಲಿಯೇ ನಡೆಯುತ್ತಿದೆ. ಎಪ್ರಿಲ್ 24 ರಂದು ಗೃಹ ಸಚಿವ ರಾಜನಾಥ್ ಸಾರನಾಥದಲ್ಲಿ ಈ ಯಾತ್ರೆಯನ್ನುಉದ್ಘಾಟಿಸಿದ್ದರೆ, ಅದು ರಾಜ್ಯದ ದಲಿತ ಪ್ರದೇಶಗಳು ಹಾಗೂ ಬೌದ್ಧಕೇಂದ್ರಗಳಲ್ಲಿಮುಂದಿನ ಆರು ತಿಂಗಳುಗಳ ಕಾಲ ಸಂಚರಿಸಿ ಬೌದ್ಧ ಧರ್ಮ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮೋದಿಯ ಅಭಿಪ್ರಾಯವನ್ನು ದಲಿತರಿಗೆ ತಿಳಿಯಪಡಿಸಲಿದೆ.

ಇದು ಬೌದ್ಧ ಧರ್ಮೀಯರ ಯಾತ್ರೆಯೆಂದು ಹೇಳಲಾಗುತ್ತಿದೆಯಾದರೂ ಅದರ ನೈಜ ಉದ್ದೇಶ ಬೌದ್ಧ ಧರ್ಮದತ್ತ ವಾಲುತ್ತಿರುವ ಹಾಗೂ ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವೆಂದು ತಿಳಿದಿರುವ ದಲಿತ ಮತದಾರರನ್ನುಓಲೈಸುವುದಾಗಿದೆ.

‘‘ಧಮ್ಮ ವಿರಿಯೋ ಅವರು ಮಾಡುತ್ತಿರುವುದು ಬೌದ್ಧ ಧರ್ವದ ಗೌರವಕ್ಕೆ ಚ್ಯುತಿ ತರುವುದಿಲ್ಲವೆಂದು ಹೇಳುವುದು ಮೂರ್ಖತನವಾಗುತ್ತದೆ,’’ಎಂದು ಅಖಿಲ ಭಾರತ ಭಿಕ್ಕ ಸಂಘದಪ್ರಧಾನ ಕಾರ್ಯದರ್ಶಿ ಭಂಟೆ ಪ್ರಗ್ಯದೀಪ್ ಹೇಳಿದ್ದಾರೆ. 2004ರಿಂದ ಆರಂಭವಾಗಿ ವಿರಿಯೋಒಂದು ದಶಕದ ಕಾಲಭಿಕ್ಕು ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ‘‘2011ರಲ್ಲಿ ಅವರು ಅನುದಾನವನ್ನು ದುರುಪಯೋಗ ಪಡಿಸಿದ ಹಾಗೂ ಸರಿಯಾಗಿ ಲೆಕ್ಕಪತ್ರ ನಿರ್ವಸಿಲ್ಲವೆಂಬ ಆರೋಪಕ್ಕೊಳಗಾದ ನಂತರ 2013ರಲ್ಲಿ ಅವರು ವಸ್ತುಶಃಬಲವಂತವಾಗಿ ಹುದ್ದೆ ತ್ಯಜಿಸಬೇಕಾಗಿ ಬಂದಿತ್ತು,’’ಎಂದು ವಿರಿಯೋ ಬದಲಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಪ್ರಗ್ಯದೀಪ್ ವಿವರಿಸುತ್ತಾರೆ. ಇದಕ್ಕೂ ಹಿಂದೆ 1983ರಲ್ಲಿ ಅವರು ಇಂತಹುದೇ ಆರೋಪಕ್ಕೊಳಗಾಗಿ ದಾರ್ಜೀಲಿಂಗ್ ಪೊಲೀಸರು ಪ್ರಕರಣ ದಾಖಲಿಸಿದ್ದರಲ್ಲದೆ ಅವರು ಒಂದು ತಿಂಗಳ ಕಾಲ ಜೈಲಿನಲ್ಲಿರಬೇಕಾಗಿ ಬಂದಿತ್ತು.
ಮುಂದೆ 2000ರಲ್ಲಿ ಅವರು ರಾಷ್ಟ್ರೀಯ ಜನತಾ ದಳವನ್ನು ಪ್ರತಿನಿಧಿಸಿಮಾರ್ಚ್‌ನಿಂದ ನವೆಂಬರ್ ತಿಂಗಳ ತನಕ ರಾಜ್ಯಸಭಾ ಅಧ್ಯಕ್ಷರಾದರೆ ನಂತರ ಬಂಡಾಯದ ಆರೋಪದ ಮೇರೆಗೆ ಪಕ್ಷ ಅವರನ್ನು ಉಚ್ಚಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News