ಫರೀದಾ ಕೋಟ್: ಮಹಿಳೆಯನ್ನು ಜೀವಂತ ಸುಟ್ಟು ಕೊಂದ ಹುಚ್ಚು ಪ್ರೇಮಿ!

Update: 2016-05-28 11:44 GMT

ಫರೀದಾಕೋಟ್, ಮೇ 28; ತಲೆಕೆಟ್ಟ ಪ್ರೇಮಿಯೊಬ್ಬ ಮಹಿಳೆಯೊಬ್ಬರನ್ನು ಬಹಿರಂಗವಾಗಿ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಜೀವಂತ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ವರದಿಯಾಗಿರುವ ಪ್ರಕಾರ ಸ್ಥಳೀಯ ಬಾಜಿಗರ್ ಬಸ್ತಿಯ ನಿವಾಸಿ ಬಲಜೀತ್ ಕೌರ್(31) ಎಂಬ ಮಹಿಳೆಗೆ ಬೆಂಕಿ ಹಚ್ಚಲಾಗಿದೆ. ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ಬೆಂಕಿ ಹಚ್ಚಿದ ವ್ಯಕ್ತಿ ಮಹಿಳೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಮದುವೆಯಾಗಲು ಹಾತೊರೆಯುತ್ತಿದ್ದಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆರೋಪಿಯ ವಿರುದ್ಧ ಕೇಸು ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News