ಬೋರಾಯಿತು ಎಂದು ಒಂದು ವಾರಮೇಯುವ ಮೇಕೆಯಾದ ಬ್ರಿಟಿಷ್ ಸಂಶೋಧಕ !

Update: 2016-05-28 11:46 GMT

ವಾಷಿಂಗ್ಟನ್ : ಜೀವನದ ಜಂಜಾಟದಿಂದ ದೂರವಿರಲು ಕೆಲವೊಮ್ಮೆ ನಾವು ನೀವೆಲ್ಲಾ ಎಲ್ಲಾದರೂ ದೂರ ಸುತ್ತಾಡಿಕೊಂಡು ಬರುತ್ತೇವೆ, ಇಲ್ಲದಿದ್ದಲ್ಲಿ ಬೀಚಿಗೋ, ಪಾರ್ಕಿಗೋ ಹೋಗುತ್ತೇವೆ ಅಥವಾ ಹಾಗೆಯೇ ಸುಮ್ಮನೆ ಐಸ್‌ಕ್ರೀಂ ಸವಿದು ಸಂತಸಪಡುತ್ತೇವೆ. ಆದರೆ ಥಾಮಸ್ ಥ್ವೇಟ್ಸ್ ಎಂಬಬ್ರಿಟಿಷ್ ಸಂಶೋಧಕನಿಗೆ ಜೀವನ ಅದೆಷ್ಟು ಬೋರಾಯಿತೆಂದರೆ ಆತ ಒಂದು ವಾರ ಮೇಯುವ ಮೇಕೆಯಾಗಿ ಬಿಟ್ಟ. ಇದು ಆಶ್ಚರ್ಯವಾದರೂ ನಿಜ.

ಈ ಸಂಶೋಧಕ ತನ್ನನ್ನು ಡಿಸೈನರ್ ಎಂದು ಕರೆಸಿಕೊಳ್ಳುತ್ತಾನೆ ಹಾಗೂ ಆತನಿಗೆ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಯೆಂದರೆ ಅಚ್ಚುಮೆಚ್ಚು. ಆಡಿನ ವೇಷಕ್ಕಾಗಿ ಆತ ಆಡಿನ ದೇಹವನ್ನೇ ಹೋಲುವ ಬಟ್ಟೆಯೊಂದನ್ನು ತಯಾರಿಸಿದನಲ್ಲದೆ ಅದನ್ನು ಧರಿಸಿ ಆತನಂತೆಯೇ ಹುಲ್ಲು ತಿಂದ ಹಾಗೂ ಸ್ವಿಸ್ ಆಲ್ಪ್ಸ್ ಪ್ರದೇಶದಲ್ಲಿ ನಾಲ್ಕು ಕಾಲುಗಳಲ್ಲಿ ಆತ್ತಿತ್ತ ಸುಳಿದಾಡಿದ.

‘‘ಆಧುನಿಕ ತಂತ್ರಜ್ಞಾನಇತರ ಪ್ರಾಣಿಗಳಂತೆ ಜೀವಿಸಲು ಮಾನವನಿಗೆ ಹೇಗೆ ಸಹಾಯ ಮಾಡಬಲ್ಲದು ಎಂದು ತಿಳಿಯಲು ಹೀಗೆ ಮಾಡಿದ್ದೇನೆ,’’ಎಂದುಥಾಮಸ್ ತನ್ನ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾನೆ. ಮೇಕೆಯಂತೆಯೇ ನಡೆದಾಡಲು ಥಾಮಸ್ ತನಗೆ ಎರಡು ನಕಲಿ ಕಾಲುಗಳನ್ನು ತಯಾರಿಸಿದ್ದನಲ್ಲದೆ ರಾತ್ರಿ ವೇಳೆ ಮೇಕೆಗಳಹಟ್ಟಿಯಲ್ಲಿ ಮಲಗುತ್ತಿದ್ದ.

ತಾನು ಮೇಕೆಯ ವೇಷದಲ್ಲಿದ್ದಾಗಿನ ತನ್ನ ಅನುಭವವನ್ನು ಥಾಮಸ್ ತನ್ನ 200ಕ್ಕೂ ಹೆಚ್ಚು ಪುಟಗಳಿರುವ ‘ಗೋಟ್ ಮ್ಯಾನ್ : ಹೌ ಐ ಟುಕ್ ಎ ಹಾಲಿಡೇ ಫ್ರಾಮ್ ಬೀಯಿಂಗ್ ಹ್ಯೂಮನ್’’ ಎಂಬ ಪುಸ್ತಕದಲ್ಲಿ ವಿವರಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News