ವಿದ್ಯುತ್ ತಂತಿ ಮುರಿದು ಬಿದ್ದು ತಾಯಿ, ಮಗ ಮೃತ್ಯು

Update: 2016-05-29 06:31 GMT

ವೈಕಂ, ಮೇ 29: ವಿದ್ಯುತ್ ತಂತಿ ಮುರಿದು ಬಿದ್ದ ಪರಿಣಾಮವಾಗಿ ತಾಯಿ- ಮಗ ವಿದ್ಯದ್ದಾಘಾತದಿಂದ ಮೃತರಾದ ದುರ್ಘಟನೆ ವೈಕಂ ಇತ್ತಿಪುಝ ಎಂಬಲ್ಲಿ ಇಂದು ನಡೆದಿದೆ. ಇತ್ತಿಪುಝದ ರಾಧಾ(45) ಅವರ ಪುತ್ರ ಸುಬಿನ್(22) ಮೃತರಾದ ದುರ್ದೈವಿಗಳಾಗಿದ್ದು ಇಂದು ಬೆಳಗ್ಗೆ 6.45 ವೇಳೆ ಈ ದಾರುಣ ದುರಂತ ಸಂಭವಿಸಿದೆ.

ಮನೆಯ ಮುಂದೆ ನಿಂತು ಹಲ್ಲುಜ್ಜುತ್ತಿದ್ದ ರಾಧಾರ ಮೇಲೆ ವಿದ್ಯುತ್ ತಂತಿ ಹಠಾತ್ ಕಡಿದು ಬಿದ್ದಿತ್ತು. ಇದನ್ನು ತಿಳಿದು ತಾಯಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಪುತ್ರನೂ ವಿದ್ಯುದ್ದಾಘಾತಕ್ಕೊಳಗಾಗಿ ಮೃತನಾಗಿದ್ದಾನೆ. ಮನೆಯ ಮುಂದಿದ್ದ ಮರವೊಂದರ ಗೆಲ್ಲು ವಿದ್ಯುತ್ ತಂತಿಗೆ ಬಡಿದ ಪರಿಣಾಮವಾಗಿ ಅದು ಮುರಿದು ಬಿದ್ದಿತ್ತು ಎಂದು ಪ್ರಾಥಮಿಕ ವರದಿಗಳು ವಿವರಿಸಿವೆ. ಇಬ್ಬರ ಮೃತದೇಹಗಳನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸುವ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News