ತನ್ಮಯ್ ಭಟ್ ಗೆ ಸೋನಂ ಕಪೂರ್ ಬೆಂಬಲ

Update: 2016-05-31 13:14 GMT

ಮುಂಬೈ, ಮೇ 31 : ಖ್ಯಾತ ಬಾಲಿವುಡ್ ನಟಿ ಸೋನಂ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ಹಲವಾರು ವಿಷಯಗಳ ಕುರಿತು ನೇರ , ನಿಷ್ಠುರ ಅಭಿಪ್ರಾಯ ವ್ಯಕ್ತಪಡಿಸಿ ಬಾಲಿವುಡ್ ನ ' ಸಂಪ್ರದಾಯ ' ಮುರಿದಿದ್ದ ಸೋನಂ ಈ ಬಾರಿ ಮತ್ತೆ ಅದೇ ರೀತಿ ಮಾಡಿದ್ದಾರೆ. 

ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ಹಾಗು ಸಚಿನ್ ತೆಂಡೂಲ್ಕರ್ ಕುರಿತು ಹಾಸ್ಯ ಕಲಾವಿದ ತನ್ಮಯ್ ಭಟ್ ಮಾಡಿದ್ದ ಹಾಸ್ಯ ವೀಡಿಯೋ ಬಗ್ಗೆ ಇಡೀ ಬಾಲಿವುಡ್ ಆತನ ವಿರುದ್ಧ ಮುಗಿ ಬಿದ್ದಿತ್ತು. ಹೆಚ್ಚು ಕಡಿಮೆ ಆತನಿಗೆ ಬೆಂಬಲ ನೀಡಿದವರು ಯಾರೂ ಇರಲಿಲ್ಲ. ಎಲ್ಲರೂ ತಾನೊಂದು ಕಲ್ಲು ಬಿಸಾಡುತ್ತೀನೆ ಎಂದೇ ತನ್ಮಯ್ ವಿರುದ್ಧ ಯುದ್ಧ ಸಾರಿದ್ದರು. ಆದರೆ ಸೋನಂ ಮಾತ್ರ ಸಮೂಹ ಸನ್ನಿಗೆ ಒಳಗಾಗದೆ ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ತನ್ಮಯ್ ಗೆ ಬೆಂಬಲ ನೀಡಿದ್ದಾರೆ. 

ಅವರ ಟ್ವೀಟ್ ಸಂದೇಶ ನೋಡಿ : "Dear @thetanmay ,being your friend I know what you say and do is never to offend, but to make people laugh..Don't you guys think there are issues that are more important than @thetanmay snapchat jokes??? I'm in shock with this over reaction!Being living legends I know @sachin_rt and @mangeshkarlata don't even know and care about what's going on!stop spewing hate on their behalf!"

" ತನ್ಮಯ್ ಅನ್ನು ನಾನು ಚೆನ್ನಾಗಿ ಬಲ್ಲೆ. ಆತನ ಉದ್ದೇಶ ಜನರನ್ನು ನಗಿಸುವುದೇ ಹೊರತು ಯಾರನ್ನೂ ಅವಮಾನ ಮಾಡುವುದಲ್ಲ. ನಮಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಅದನ್ನು ಬಿಟ್ಟು ಆತನ ಮೇಲೆ ಮುಗಿ ಬೀಳುವ ಅವಶ್ಯಕತೆ ಇಲ್ಲ. ಜೀವಂತ ದಂತಕತೆ ಗಳಾದ   ಲತಾ ಮಂಗೇಶ್ಕರ್ ಹಾಗು ಸಚಿನ್ ಅವರ ಹೆಸರಲ್ಲಿ ನಡೆಯುತ್ತಿರುವ ಈ ಗಲಾಟೆಯ ಗೋಜಿಗೇ ಹೋಗಿಲ್ಲ "  ಎಂದು ಸೋನಂ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News