ಐಎಎಸ್ ಅಧಿಕಾರಿಗೆ ಶೋಕಾಸ್

Update: 2016-05-31 17:11 GMT

ಭೋಪಾಲ,ಮೇ 31: ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರನ್ನು ಹೊಗಳಿ ಮತ್ತು ಕೇಸರಿ ಪರಿವಾರದ ವಿರುದ್ಧ ಫೇಸ್‌ಬುಕ್ ಪೋಸ್ಟ್‌ಗಾಗಿ ಬರ್ವಾನಿಯ ಹಿಂದಿನ ಜಿಲ್ಲಾಧಿಕಾರಿ ಅಜಯ ಸಿಂಗ್ ಗಂಗ್ವಾರ್ ಅವರಿಗೆ ಮಧ್ಯಪ್ರದೇಶದ ಬಿಜೆಪಿ ಸರಕಾರವು ಶೋಕಾಸ್ ನೋಟಿಸ್‌ನ್ನು ಜಾರಿಗೊಳಿಸಿದೆ. ಐಎಎಸ್ ಅಧಿಕಾರಿಯ ಈ ಫೇಸ್‌ಬುಕ್ ಪೋಸ್ಟ್ ಬಳಿಕ ಅವರನ್ನು ಭೋಪಾಲದಲ್ಲಿಯ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿತ್ತು.

 2015,ಜ.23ರಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಫೇಸ್‌ಬುಕ್ ಫೋಸ್ಟ್‌ವೊಂದನ್ನು ‘ಲೈಕ್’ಮಾಡಿದ್ದ ಗಂಗ್ವಾರ್ ‘ಮೋದಿ ವಿರುದ್ಧ ಜನಕ್ರಾಂತಿಯೊಂದು ಆರಂಭಗೊಳ್ಳಬೇಕಾಗಿದೆ ’ಎಂದು ಬರೆದಿದ್ದರು ಎಂದೂ ಹೇಳಲಾಗಿದೆ.
ಗಂಗ್ವಾರ್ ಅವರ ಕೃತ್ಯವು ಅಖಿಲ ಭಾರತ ಸೇವಾ(ನಡವಳಿಕೆ)ನಿಯಮಗಳು,1968 ಅನ್ನು ಉಲ್ಲಂಘಿಸಿದೆ ಎಂದು ಮೂಲಗಳು ತಿಳಿಸಿವೆ.
ಗಂಗ್ವಾರ್ ಅವರ ಎತ್ತಂಗಡಿಯನ್ನು ವಿರೋಧಿಸಿ ಸರಕಾರಿ ಅಧಿಕಾರಿಗಳ ಒಂದು ವರ್ಗವು ಅವರಿಗೆ ಬೆಂಬಲ ವ್ಯಕ್ತಪಡಿಸಿದೆಯಾದರೂ,ಹಿರಿಯ ಅಧಿಕಾರಿಯೋರ್ವರು ಅವರ ವಿರುದ್ಧದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಅಭಿವ್ಯಕ್ತಿ ಸ್ಯಾತಂತ್ರವೆಂದರೆ ಏನನ್ನು ಬೇಕಾದರೂ.....ಅದೂ ಅಖಿಲ ಭಾರತ ಸೇವಾ(ನಡವಳಿಕೆ) ನಿಯಮಗಳನ್ನು ಉಲ್ಲಂಘಿಸಿ ಗೀಚುವುದು ಎಂದು ಅರ್ಥವಲ್ಲ ಎಂಬ ಕಠಿಣ ಸಂದೇಶವೊಂದನ್ನು ಅಧಿಕಾರ ಶಾಹಿಗೆ ರವಾನಿಸಬೇಕಾಗಿದೆ. ಇಂತಹ ಕ್ರಮವೊಂದನ್ನು ತೆಗೆದುಕೊಳ್ಳದಿದ್ದರೆ ಯಾವುದೇ ಅಧಿಕಾರಿಯು ಸಾಮಾಜಿಕ ಮಾಧ್ಯಮದಲ್ಲಿ ಏನೂ ಬೇಕಾದರೂ ಬರೆಯಬಹುದು ಮತ್ತು ಇದು ಅಧಿಕಾರ ಶಾಹಿಯಲ್ಲಿ ಅರಾಜಕತೆಯ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News