ಜಿಶಾಕೊಲೆ ಪ್ರಕರಣ: ಸಾಯುವ ಮೊದಲು ಪ್ರತಿರೋಧ ಒಡ್ಡಿದ್ದ ಜಿಶಾ

Update: 2016-06-01 04:29 GMT

  ಕೊಚ್ಚಿ, ಜೂನ್1:ಜಿಶಾರ ಕೊಲೆಗಾರ ಎಂದು ಶಂಕಿಸಲಾದ ಇಬ್ಬರ ರೇಖಾ ಚಿತ್ರವನ್ನು ಪೊಲೀಸರು ಮತ್ತೊಮ್ಮೆ ತಯಾರಿಸಿದ್ದು ತನ್ಮಧ್ಯೆ ಡಿಎನ್‌ಎ ಪರೀಕ್ಷೆಯ ವರದಿಯಲ್ಲಿ ಕಂಡು ಬಂದ ಪ್ರಕಾರ ಪರೀಕ್ಷೆಗೆ ಕಳುಹಿಸಿದ ಎರಡೂ ಸ್ಯಾಂಪಲ್‌ಗಳು ಒಬ್ಬನೇ ಆರೋಪಿಯದ್ದಾಗಿದೆ ಎಂದು ಪೊಲೀಸರು ಮತ್ತೊಮ್ಮೆ ದೃಢೀಕರಿಸಿದ್ದಾರೆ. ಜಿಶಾ ಆರೋಪಿಯೊಂದಿಗೆ ಹೋರಾಡುವಾಗ ಆತನಿಗೆ ಗಾಯವಾಗಿತ್ತು ಎಂಬುದು ಈಗ ಬಂದಿರುವ ಪರೀಕ್ಷಾ ಫಲಿತಾಂಶದಿಂದ ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಶಾ ಮನೆಯಿಂದ ಕೊಲೆಗಾರ ಹೊರಟು ಹೋಗುವಾಗ ನೆರೆಯ ಮೂವರು ಗ್ರಹಿಣೆಯರಿಂದ ಪೊಲೀಸರು ಹೊಸದಾಗಿ ಸಾಕ್ಷ್ಯವನ್ನು ಪಡೆದಿದ್ದಾರೆ. ಎಡಿಜಿಪಿ ಬಿ.ಸಂಧ್ಯಾರ ಉಪಸ್ಥಿತಿಯಲ್ಲಿ ಸಾಕ್ಷ್ಯವನ್ನು ಪಡೆದು ಪೊಲೀಸರು ರೇಖಾ ಚಿತ್ರವನ್ನು ತಯಾರಿಸಿದ್ದಾರೆ. ಮೂವತ್ತರಿಂದ ನಲ್ವತ್ತು ವರ್ಷವಯಸ್ಸಿನ ನಡು ಪ್ರಾಯದ ವ್ಯಕ್ತಿಗಳ ಚಿತ್ರಗಳಿವು. ಎಪ್ರಿಲ್ 28ರಂದು ಜಿಶಾರ ಮನೆಯ ಬಾಗಿಲಿನ ಟವರ್‌ಬೋಲ್ಟ್‌ನಲ್ಲಿ ಕಂಡು ಬಂದ ರಕ್ತದ ಕಲೆಯ ಸ್ಯಾಂಪಲ್ ತೆಗೆದು ಕೊಳ್ಳಲಾಗಿತ್ತು. ಪೋಸ್ಟ್‌ಮಾರ್ಟಂ ವೇಳೆ ಉಗುರನ್ನು ತೆಗೆದು ಕೊಳ್ಳಲಾಗಿದ್ದು ಇವೆರಡನ್ನೂ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ಫಲಿತಾಂಶ ಇದೀಗ ಲಭಿಸಿದೆ ಎಂದು ಗ್ರಾಮಾಂತರ ಎಸ್ಪಿ ಯತೀಶ್ ಚಂದ್ರ ತಿಳಿಸಿದ್ದಾರೆ.

ಜಿಶಾರ ಉಗುರಿನಲ್ಲಿ ಕೊಲೆಗಾರನ ಮಾಂಸದ ಅಂಶಗಳು ಇತ್ತು. ಜಿಶಾರ ಬೆನ್ನಲ್ಲಿ ಮೂರು ಕಡೆ ಕೊಲೆಗಾರ ಕಚ್ಚಿದ್ದ. ಆದ್ದರಿಂದ ಚೂಡಿದಾರದ ಟಾಪ್‌ನಲ್ಲಿದ್ದ ಆತನ ಉಗುಳನ್ನು ಮೊದಲು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದು ಮತ್ತು ಈಗ ಬಂದಿರುವ ಫಲಿತಾಂಶದಿಂದಲೂ ಒಬ್ಬನದೇ ಡಿಎನ್‌ಎ ಎಂದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News