ಗುಜರಾತ್‌ನಲ್ಲಿ ಭಾರತದ ಮೊದಲ ಅಧಿಕೃತ ಇಸ್ಲಾಮಿಕ್ ಬ್ಯಾಂಕ್

Update: 2016-06-01 16:33 GMT

   ಹೊಸದಿಲ್ಲಿ, ಜೂ.1: ಜೆಡ್ಡಾ ಮೂಲದ ಇಸ್ಲಾಮಿಕ್ ಡೆವೆಲೆಪ್ಮೆಂಟ್ ಬ್ಯಾಂಕ್ ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ತವರೂರಾದ ಗುಜರಾತಿನಲ್ಲಿ ತನ್ನ ಶಾಖೆಯನ್ನು ಆರಂಭಿಸಲಿದ್ದು ದೇಶೀಯ ಸ್ಟಾರ್ಟ್-ಅಪ್ ಕಂಪೆನಿಗಳಿಗೆ ಮತ್ತು ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿನ ಮುಸ್ಲಿಮ್ ದೇಶಗಳಿಗೆ ಭಾರತದಿಂದ ಉತ್ಪನ್ನಗಳನ್ನು ರಫ್ತ್ತು ಮಾಡುವ ಕಂಪೆನಿಗಳಿಗೆ ಧನಸಹಾಯ ಮಾಡಲಿದೆ.

 ಭಾರತದ ಎಕ್ಸಿವ್ ಬ್ಯಾಂಕ್ ಹಾಗೂ ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕಿನ ಖಾಸಗಿ ರಂಗದ ಸಹಸಂಸ್ಥೆ ಇಸ್ಲಾಮಿಕ್ ಕಾರ್ಪೊರೇಶನ್ ಫಾರ್ ದಿ ಡೆವಲಪ್ಮೆಂಟ್ ಆಫ್ ದಿ ಪ್ರೈವೇಟ್ ಸೆಕ್ಟರ್ (ಐಸಿಡಿ) ಜತೆ ನಡೆಸಲಾದ ಒಡಂಬಡಿಕೆಯಂತೆ ಬ್ಯಾಂಕ್ ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಲಿದೆ. ಈ ಒಪ್ಪಂದವನ್ನು ಎಪ್ರಿಲ್ ತಿಂಗಳಲ್ಲಿ ಮೋದಿಯ ಸೌದಿ ಅರೇಬಿಯಾ ಭೇಟಿ ಸಂದರ್ಭ ಮಾಡಲಾಗಿತ್ತು.
100 ಮಿಲಿಯನ್ ಡಾಲರ್ ಶೇರು ಬಂಡವಾಳ ಹೊಂದಿರುವ ಐಡಿಬಿಗೆ ಒಟ್ಟು 56 ಮುಸ್ಲಿಂ ರಾಷ್ಟ್ರಗಳು ಸದಸ್ಯರಾಗಿವೆ. ಇವುಗಳಲ್ಲಿ ಹೆಚ್ಚಿನ ರಾಷ್ಟ್ರಗಳು ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೊ-ಆಪರೇಶನ್‌ಗೆ ಸೇರಿವೆ.
 ಈ ಬ್ಯಾಂಕ್ ಇಸ್ಲಾಮಿಕ್ ತತ್ವದಂತೆ ಬಡ್ಡಿ ವಿಧಿಸುವುದಿಲ್ಲವಾದರೂ ಸಾಲ ಪಡೆದವರ ಲಾಭ ಯಾ ನಷ್ಟದ ಒಂದಂಶವನ್ನು ಹಂಚಿಕೊಳ್ಳುವುದು. ಮುಸ್ಲಿಮೇತರರೂ ಈ ಬ್ಯಾಂಕಿನ ಸೇವೆ ಪಡೆಯಬಹುದಾಗಿದೆ.
  ಗುಜರಾತಿನ ಖ್ಯಾತ ಮುಸ್ಲಿಮ್ ಉದ್ಯಮಿ ಹಾಗೂ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ವೌಲಾನಾ ನ್ಯಾಷನಲ್ ಉರ್ದು ಯುನಿವರ್ಸಿಟಿ ಇದರ ಕುಲಪತಿಗಳಾಗಿ ನೇಮಕಗೊಂಡಿದ್ದ ಝಪರ್ ಸರೇಶ್ ವಾಲಾ ಈ ಇಸ್ಲಾಮಿಕ್ ಡೆವಲೆಪ್ಮೆಂಟ್ ಬ್ಯಾಂಕನ್ನು ಭಾರತದಲ್ಲಿ ಮುನ್ನಡೆಸಲಿದ್ದಾರೆ.
ಭಾರತದಲ್ಲಿ ಬ್ಯಾಂಕಿನ ಮುಖ್ಯ ಕಚೇರಿ ಅಹ್ಮದಾಬಾದ್ ನಲ್ಲಿರುತ್ತದೆ. ಬ್ಯಾಂಕು ಭಾರತದಲ್ಲಿ 100 ಮಿಲಿಯನ್ ಡಾಲರ್ ಸಾಲ ನೀಡಲು ಯೋಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News