ಯುಜಿಸಿಯಿಂದ ಕ್ರೀಡಾ ವಿಜ್ಞಾನದಲ್ಲಿ 2 ನೂತನ ಕೋರ್ಸ್‌ಗಳು

Update: 2016-06-01 18:26 GMT

ಹೊಸದಿಲ್ಲಿ,ಜೂ.1: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಎರಡು ನೂತನ ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ಬುಧವಾರ ಅಧಿಸೂಚನೆಯೊಂದನ್ನು ಪ್ರಕಟಿಸಿದೆ.

ಬ್ಯಾಚುಲರ್ ಆಫ್ ಫಿಜಿಕಲ್ ಎಜುಕೇಷನ್ ಆ್ಯಂಡ್ ಸ್ಪೋರ್ಟ್ಸ್(ಬಿಪಿಇಎಸ್) ಮತ್ತು ಮಾಸ್ಟರ್ ಆಫ್ ಫಿಜಿಕಲ್ ಎಜುಕೇಷನ್ ಆ್ಯಂಡ್ ಸ್ಪೋರ್ಟ್ಸ್(ಎಂಪಿಇಎಸ್) ಇವು ನೂತನ ಕೋರ್ಸ್‌ಗಳಾಗಿವೆ.

ದೈಹಿಕ ಶಿಕ್ಷಣದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ ಕೋರ್ಸ್‌ಗಳನ್ನು ನಡೆಸುತ್ತಿರುವ ವಿವಿಗಳು ಅವುಗಳನ್ನು ಪುನರ್‌ರೂಪಿಸಬೇಕು ಮತ್ತು ಪದವಿಗಳನ್ನು ಬಿಪಿಎಎಸ್ ಮತ್ತು ಎಂಪಿಇಎಸ್ ಎಂದು ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News