ಮಣಿಪುರದಲ್ಲಿ ಎಸೆಸೆಲ್ಸಿ ಪರೀಕ್ಷೆ: 73 ಶಾಲೆಗಳಲ್ಲಿ ಓರ್ವ ವಿದ್ಯಾರ್ಥಿ ಕೂಡಾ ತೇರ್ಗಡೆಯಾಗಿಲ್ಲ!

Update: 2016-06-02 05:58 GMT

  ಇಂಫಾಲ, ಜೂನ್ 2: ಮಣಿಪುರದ ಹತ್ತನೆ ತರಗತಿ ಪರೀಕ್ಷೆ ನಡೆದಿದ್ದು 73 ಸರಕಾರಿ ಶಾಲೆಗಳಲ್ಲಿ ಒಬ್ಬನೆ ಒಬ್ಬ ವಿದ್ಯಾರ್ಥಿಯೋ ವಿದ್ಯಾರ್ಥಿನಿಯೋ ತೇರ್ಗಡೆಯಾಗಿಲ್ಲ. ಈ ವರ್ಷ ರಾಜ್ಯದಲ್ಲಿ 323 ಶಾಲೆಗಳಿಂದ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ದರು. 323 ಶಾಲೆಗಳಲ್ಲಿ ಒಟ್ಟು 6,486 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರೂ ಶೇ.48.2 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.

ಕೇವಲ 2781ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ. ರಾಜ್ಯದ 28 ಸರಕಾರಿ ಶಾಲೆಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಎಸೆಸೆಲ್ಸಿ ಪಾಸಾಗಿದ್ದಾನೆ. ಯೋಗ್ಯ ಅಧ್ಯಾಪಕರಿಲ್ಲದ್ದು ಹಾಗೂ ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಫೇಲು ಆಗಲು ಕಾರಣವೆಂದು ಶಿಕ್ಷಣ ತಜ್ಞರು ಆರೋಪಿಸಿದ್ದಾರೆ. 2013ರಲ್ಲಿ ಪರೀಕ್ಷೆ ಬರೆದ ಮಣಿಪುರದ 28ಶಾಲೆಗಳಲ್ಲಿ ಮತ್ತು 2014ರಲ್ಲಿ ಪರೀಕ್ಷೆ ಬರೆದ 48ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೋ ವಿದ್ಯಾರ್ಥಿನಿಯೋ ಎಸೆಸೆಲ್ಸಿತೇರ್ಗಡೆಯಾಗಿರಲಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News