ಮುಹಮ್ಮದ್ ಅಲಿ ಕೇರಳಕ್ಕೆ ಹಲವು ಪದಕ ಗೆದ್ದಿದ್ದಾರೆ !

Update: 2016-06-04 15:27 GMT

ತಿರುವನಂತಪುರಮ್ , ಜೂ. 4 :  ಮುಹಮ್ಮದ್ ಅಲಿ ತನ್ನ ಜೀವಮಾನದಲ್ಲಿ ಹಲವಾರು ನಾಕ್ ಔಟ್ ಪಂಚ್ ನೀಡಿದ್ದಾರೆ. ಆದರೆ ಅವರ ನಿಧನದ ಬಳಿಕ ಭಾರತದ ರಾಜಕಾರಣಿಯೊಬ್ಬರು ಬಹುದೊಡ್ಡ ಪಂಚ್ ಹೊಡೆದಿದ್ದಾರೆ. 
ಕೇರಳದ ಕ್ರೀಡಾ ಸಚಿವ ಇ ಪಿ ಜಯರಾಜನ್ ಅವರೇ ಈ ವಿಶೇಷ ಸಾಧನೆ ಮಾಡಿದವರು. ಮನೋರಮಾ ಟಿವಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಜಯರಾಜನ್ ಅವರು " ನನಗೆ ಮುಹಮ್ಮದ್ ಅಲಿ ಅಮೇರಿಕಾದಲ್ಲಿ ಮೃತಪಟ್ಟ ವಿಷಯ ಈಗಷ್ಟೇ ಗೊತ್ತಾಯಿತು. ಅವರ ಪಾರಮ್ಯವಿದ್ದ ಕಾಲದಲ್ಲಿ ಅವರು ಕೇರಳಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ " ಎಂದು ಬಿಟ್ಟರು. 
ಜಯರಾಜನ್ ಅವರ ಈ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಬುಗ್ಗೆಗೆ ಕಾರಣವಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News