ಭ್ರಷ್ಟ ಅಧಿಕಾರಿಯ ಪತ್ನಿ, ಮಗ, ಸೊಸೆಗೂ 5 ವರ್ಷ ಜೈಲು, ದಂಡ!

Update: 2016-06-05 04:09 GMT

ಜಬಲ್ಪುರ, ಜೂ.5: ಭ್ರಷ್ಟ ಅಧಿಕಾರಿಗಳ ಕುಟುಂಬ ಸದಸ್ಯರು ಕೂಡಾ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಮಾನ ಹೊಣೆಗಾರರು. ಆತನ ಆದಾಯವನ್ನು ಅವರೂ ಹಂಚಿಕೊಳ್ಳುತ್ತಿದ್ದರೆ, ಅವರೂ ಬಾಧ್ಯಸ್ಥರಾಗುತ್ತಾರೆ. ಕೇಂದ್ರ ಸರ್ಕಾರಿ ನೌಕರಿಯಲ್ಲಿರುವ ಭ್ರಷ್ಟ ಅಧಿಕಾರಿಯೊಬ್ಬರ ಪತ್ನಿ, ಮಗ, ಸೊಸೆಗೂ 5 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಸುಮಾರು 94 ಲಕ್ಷ ರೂಪಾಯಿ ಅವ್ಯವಹಾರ ಎಸಗಿದ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ನ್ಯಾಯಮೂರ್ತಿ ಯೋಗೀಶ್‌ಚಂದ್ರ ಗುಪ್ತ ಅವರು ಆರೋಪಿಗೆ 2.5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.

ಸೂರ್ಯಕಾಂತ ಗೌರ್ (61) ಎಂಬ ಕೇಂದ್ರ ಸರ್ಕಾರಿ ಉದ್ಯೋಗಿಯನ್ನು ಉಪ ಲೆಕ್ಕ ಅಧಿಕಾರಿಯಾಗಿ ರಕ್ಷಣಾ ಲೆಕ್ಕಪತ್ರ ಇಲಾಖೆಗೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗೌರ್ ಸರ್ಕಾರಿ ಹಣವನ್ನು ತಮ್ಮ ಪತ್ನಿ ವಿನಿತಾ ಗೌರ್, ಮಗ ಶಿಶಿರ್ ಗೌರ್ ಹಾಗೂ ಸೊಸೆ ಸುನಿತಾ ಗೌರ್ ಅವರ ಖಾತೆಗೆ ಅಕ್ರಮವಾಗಿ ವರ್ಗಾಯಿಸಿದ್ದು ಸಾಬೀತಾಗಿದೆ ಎಂದು ಸಾರ್ವಜನಿಕ ಅಭಿಯೋಜಕ ಪ್ರತೀಶ್ ಜೈನ್ ಹೇಳಿದ್ದಾರೆ.

ಸಿಬಿಐ 2010ರ ಜುಲೈ 14ರಂದು ಗೌರ್ ಮನೆ ಮೇಲೆ ದಾಳಿ ಮಾಡಿ, 94 ಲಕ್ಷ ರೂಪಾಯಿ ಅವ್ಯವಹಾರದ ಬಗ್ಗೆ ದಾಖಲೆ ಸಂಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News