ಮೂರು ತಲಾಕ್ ನಿಷೇಧ ಬೇಡಿಕೆಯನ್ನು ವಿರೋಧಿಸಿ ರಂಗಪ್ರವೇಶಿಸಿದ ಮುಸ್ಲಿಮ್ ಮಹಿಳಾ ನಾಯಕಿರು!

Update: 2016-06-05 11:47 GMT

 ಹೊಸದಿಲ್ಲಿ, ಜೂನ್ 5: ಮೂರು ತಲಾಖ್ ನ್ನು ನಿಷೇಧಿಸುವುದನ್ನು ವಿರೋಧಿಸಿ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾಬೋರ್ಡ್‌ನ ಮಹಿಳಾ ಸದಸ್ಯೆಯರು ರಂಗಪ್ರವೇಶಿಸಿದ್ದಾರೆ. ಮೂರು ತಲಾಖ್ ನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಝಕಿಯಾ ಸೋಮ್‌ರ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಯುತ್ತಿದ್ದು ಈತನ್ಮಧ್ಯೆ ಅದನ್ನು ವಿರೋಧಿಸಿ ಲಾ ಬೋರ್ಡ್‌ನ ಮಹಿಳಾ ಪ್ರತಿನಿಧಿಗಳು ರಂಗಪ್ರವೇಶಿಸಿದ್ದಾರೆ.

  ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಸಮಾನ ಸಿವಿಲ್ ಕೋಡ್ ಜಾರಿಗೆ ತರಲು ಉಪಯುಕ್ತವಾಗುವ ರೀತಿಯಲ್ಲಿ ಮೂರು ತಲಾಖ್ ನಿಷೇಧ ಬೇಡಿಕೆಯ ಮೂಲಕ ರಂಗ ಸಜ್ಜುಗೊಳಿಸುವ ಕೆಲಸವನ್ನು ಸಹಿ ಸಂಗ್ರಹಿಸುವವರು ಮಾಡುತ್ತಿದ್ದಾರೆ ಎಂದು ಬೋರ್ಡ್ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಅಸ್ಮಾ ಝಹರ್ ಆರೋಪಿಸಿದ್ದಾರೆ. ಇಸ್ಲಾಮ್‌ನಲ್ಲಿ ವಿಶ್ವಾಸ ಇಲ್ಲದವರು ಹಾಗೂ ಅದನ್ನು ಅನುಷ್ಠಾನ ಮಾಡದಿರುವವರು ಇಸ್ಲಾಮಿಕ್ ನಿಯಮಗಳಲ್ಲಿ ತಿದ್ದುಪಡಿ ತರಬೇಕೆಂದು ಆಗ್ರಹಿಸುತ್ತಿದ್ದಾರೆ. ವಿಶ್ವಾಸವಿಲ್ಲದವರಿಗೆ ಬೇರೆ ವಿವಾಹ ನಿಯಮಗಳ ಪ್ರಕಾರ ವಿವಾಹಿತರಾಗಲು ಭಾರತದಲ್ಲಿ ಅವಕಾಶವಿದ್ದು ಝಕಿಯ ಮುಂತಾದವರು ವಿಶ್ವಾಸಿಗಳ ವಿಷಯಕ್ಕೆ ಕೈಹಾಕುತ್ತಿರುವುದು ಯಾಕೆ ಎಂದು ಡಾ. ಅಸ್ಮಾ ಪ್ರಶ್ನಿಸಿದ್ದಾರೆ.

ಕುಟುಂಬ ವಿವಾದವನ್ನು ಬಗೆಹರಿಸಲಿಕ್ಕಿರುವ ಕೊನೆಯ ದಾರಿಯಾಗಿ ಇಸ್ಲಾಮ್ ವಿವಾಹ ವಿಚ್ಛೇದನವನ್ನು ಪರಿಗಣಿಸುತ್ತದೆ. ಇಸ್ಲಾಮ್  ತಲಾಖ್ ನ್ನು ನಿರುತ್ತೇಜಿಸಿದೆ. ಇಸ್ಲಾಮ್ ಮಹಿಳೆಗೂ ಪುರುಷನಿಗೂ ಸಮಾನ ಅವಕಾಶಗಳನ್ನು ನೀಡಿದೆ ಎಂದು ಡಾ. ಅಸ್ಮಾ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News