ಉ.ಪ್ರ, ಮ.ಪ್ರ, ಉತ್ತರಾಖಂಡದಲ್ಲೂ ಪ್ರತಿಭಟನೆ ನಡೆಸುತ್ತೇವೆ: ಜಾಟ್ ನಾಯಕ ಯಶ್‌ಪಾಲ್ ಮಲಿಕ್

Update: 2016-06-05 11:54 GMT

ಹೊಸದಿಲ್ಲಿ, ಜೂನ್ 5: ಹರಿಯಾಣದಲ್ಲಿ ಮತ್ತೊಮ್ಮೆ ಜಾಟ್‌ರು ಮೀಸಲಾತಿ ಅಭಿಯಾನಕ್ಕಿಳಿದಿದ್ದಾರೆ. ಹರಿಯಾಣದ ಕೆಲವು ಸ್ಥಳಗಳಲ್ಲಿ ಶಾಂತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಹರಿಯಾಣ ಸರಕಾರ ರೋಹ್ಟಕ್ ಸಹಿತ ಹಲವು ಜಿಲ್ಲೆಗಳ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದೆ. ಸೆಕ್ಷನ್ 144 ಜಾರಿಗೊಳಿಸಿದೆ. ಆಲ್‌ಇಂಡಿಯಾ ಜಾಟ್ ಮೀಸಲಾತಿ ಸಂಘರ್ಷ ಸಮಿತಿಯ ಅಧ್ಯಕ್ಷ ಯಶ್‌ಪಾಲ್ ಮಲಿಕ್‌ರು ತಮ್ಮ ಸಮುದಾಯದ ಜನರು 8 ತಾರೀಕಿಗೆ ಉತ್ತರಪ್ರದೇಶದಲ್ಲಿ, 10 ತಾರೀಕಿಗೆ ಮಧ್ಯಪ್ರದೇಶದಲ್ಲಿ, ಹನ್ನೊಂದು ತಾರೀಕಿಗೆ ಉತ್ತರಾಖಂಡದಲ್ಲಿ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ.

ಯಶ್‌ಪಾಲ್ ಮಲಿಕ್ ಹೇಳಿದ್ದು ಹೀಗೆ:

►ನಮ್ಮ ಪ್ರತಿಭಟನೆ ಶಾಂತ ಪೂರ್ಣವಾಗಿರಲಿದೆ.

►ಒಂದುವೇಳೆ ಹರ್ಯಾಣ ಸರಕಾರ ನಮ್ಮೊಂದಿಗೆ ಮಾತಾಡುವುದಾದರೆ ನಾವು ಪ್ರತಿಭಟನೆ ಮಾಡುವುದಿಲ್ಲ.

► ಪ್ರಧಾನಿ ಹರಿಯಾಣ ಸರಕಾರಕ್ಕೆ ನಮ್ಮೊಡನೆ ಮಾತಾಡಲು ನಿರ್ದೇಶನ ನೀಡಬೇಕು

►ಜಾಟ್ ಸಮುದಾಯ ಯಾರಿಗೂ ಹೆದರುವುದಿಲ್ಲ

►ವೋಟ್‌ಬ್ಯಾಂಕ್‌ಗಾಗಿ ರಾಜಕೀಯ ಮಾಡುವವರನ್ನು ನಾವು ಕಿತ್ತೆಸೆಯುತ್ತೇವೆ

►ನಾವು ಜಾತ್ಯಾಧಾರಿತ ಚಿಂತನೆಗಳನ್ನೂ ವಿರೋಧಿಸುತ್ತೇವೆ.

►ನಾವು ಹರಿಯಾಣ ಪೊಲೀಸರನ್ನು ನಿಯುಕ್ತಿಗೊಳಿಸಿರುವುದನ್ನು ಸ್ವಾಗತಿಸುತ್ತಿದ್ದೇವೆ

►ನಾವು ನೀಡಿದ ಸಲಹೆಗಳನ್ನು ನಿರ್ಲಕ್ಷಿಸಲಾಗಿದೆ.

►ಅವರು ತಮ್ಮ ಧ್ವನಿಯನ್ನು ಬದಲಾಯಿಸಿದ್ದಾರೆ ಹಾಗೂ ಮಸೂದೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ

►ಅವರುನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ

►ಒಂದುವೇಳೆ ಜನರು ಬೀದಿಗಿಳಿಯುತ್ತಾರೆಂದಾದರೆ ಅದು ರಾಜಕೀಯ ವೈಫಲ್ಯವಾಗಿದೆ.

ಜಾಟರು ಯಾರು?

ಜಾಟರು ಎಂದು ಹರಿಯಾಣದ ರೈತರಲ್ಲಿರುವ ಒಂದು ಜಾತಿಯಾಗಿದೆ. ಈ ಜಾತಿಯ ಜನರು ಉತ್ತರಪ್ರದೇಶ, ರಾಜಸ್ಥಾನ, ಹಾಗೂ ಗುಜರಾತ್‌ನಲ್ಲಿಯೂ ವಾಸಿಸುತ್ತಿದ್ದಾರೆ. ಆದರೆ ಹೆಚ್ಚಿನ ಜಾಟರು ಹರಿಯಾಣದಲ್ಲಿದ್ದಾರೆ. ಹಾಗೂ ಹರಿಯಾಣದ ರಾಜಕೀಯದಲ್ಲಿ ಇವರು ಪ್ರಭಾವವನ್ನು ಹೊಂದಿದ್ದಾರೆ. ಇಬ್ಬರುದೊಡ್ಡ ಜಾಟ್ ನಾಯಕರು ಸರ್ ಛೋಟು ರಾಮ್ ಹಾಗೂ ಚೌಧರಿ ಚರಣ್ ಸಿಂಗ್. ಇವರಲ್ಲಿ ಚರಣ್ ಸಿಂಗ್ ದೇಶದ ಪ್ರಧಾನಿಯೂ ಆಗಿದ್ದರು. ಜಾಟ್‌ರ ಬೇಡಿಕೆಯೇನು?: ಜಾಟ್ ಸಮುದಾಯ ಸರಕಾರಿ ನೌಕರಿಯಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅವರಿಗೆ ಒಬಿಸಿ ಕೆಟಗರಿಯಲ್ಲಿ ಮೀಸಲಾತಿಯನ್ನು ಅವರು ಕೇಳುತ್ತಿದ್ದಾರೆ.ಇದಕ್ಕಾಗಿ ಜಾಟರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬೇಡಿಕೆ ಮೊದಲು ಯಾವಾಗ ಹುಟ್ಟಿಕೊಂಡಿತು?

1991ರಲ್ಲಿ ಗುರುನಾಮ್ ಸಿಂಗ್ ಆಯೋಗದ ವರದಿಯಲ್ಲಿ ಜಾಟ್ ಸಮುದಾಯವನ್ನು ಹಿಂದುಳಿದ ಸಮುದಾಯ ಎನ್ನಲಾಗಿತ್ತು. ಆದರೆ ಭಜನ್‌ಲಾಲ್ ಸರಕಾರ ಈ ಅಧಿಸೂಚನೆಯನ್ನು ವಾಪಸು ತೆಗೆದುಕೊಂಡಿತು. ಎರಡು ಹೊಸ ಸಮಿತಿಗಳು ರಚನೆಯಾದವು. ಅವು ಯಾವುವೂ ಜಾಟರನ್ನು ಹಿಂದುಳಿದ ಸಮುದಾಯದ ಪಟ್ಟಿಗೆ ಸೇರಿಸಲಿಲ್ಲ. 2004ರಲ್ಲಿ ಭೂಪೇಂದ್ರಸಿಂಗ್ ಹೂಡಾ ಅಧಿಕಾರಕ್ಕೆ ಬಂದರು. ಅವರು ಜಾಟ್‌ರಿಗೆ ಮೀಸಲಾತಿ ನೀಡುವ ಬೇಡಿಕೆಯನ್ನು ಹಲವು ಬಾರಿ ಮುಂದಿಟ್ಟರು.

1966ರಲ್ಲಿ ಪಂಜಾಬ್‌ನಿಂದ ಹರ್ಯಾಣ ಬೇರ್ಪಡೆಗೊಂಡನಂತರ ಜಾಟರ ಪ್ರಭಾವ ಹರ್ಯಾಣದ ರಾಜಕೀಯದಲ್ಲಿದೆ. ಈವರೆಗಿನ ಹತ್ತು ಮುಖ್ಯಮಂತ್ರಿಗಳಲ್ಲಿ ಏಳು ಮಂದಿ ಜಾಟರೇ ಆಗಿದ್ದಾರೆ. ಹರಿಯಾಣದ ತೊಂಬತ್ತು ವಿಧಾನಸಭಾ ಸೀಟುಗಳಲ್ಲಿ ಶೇ. 27ರಷ್ಟು ಮತಗಳು ಜಾಟ್‌ಸಮುದಾಯಕ್ಕಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜಾಟ್ ಸಮುದಾಯದವರಲ್ಲ. ಹರಿಯಾಣದಲ್ಲಿ ಜಾಟ್ ಬೆಲ್ಟ್ ರೋಹ್ಟಕ್, ಝಜ್ಜಾರ್, ಭಿವಾನಿಯಾಗಿದೆ. ಇಲ್ಲಿ ಜಾಟ್‌ರ ವರ್ಚಸ್ಸು ಸದಾ ಕಾಣಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News