ಭಾರತಕ್ಕೆ ಈ ವಾರ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವಲಯದ ಸದಸ್ಯತ್ವಸಂಭವ

Update: 2016-06-05 18:38 GMT

ಹೊಸದಿಲ್ಲಿ, ಜೂ.5: ಭಾರತವು ಈ ವಾರ ತಂತ್ರಜ್ಞಾನ ನಿಯಂತ್ರಣ ವಲಯದ (ಎಂಟಿಸಿಆರ್) 35ನೆ ಸದಸ್ಯನಾಗುವ ವ್ಯಾಪಕ ನಿರೀಕ್ಷೆಯಿದೆ. ಇದು, ಪ್ರಸರಣ ತಡೆ ನಿಯಮಗಳಿಗೊಳಪಟ್ಟು ಮಿತ್ರ ದೇಶಗಳಿಂದ ಕ್ಷಿಪಣಿ ತಂತ್ರಜ್ಞಾನದ ಆಯಾತ ಹಾಗೂ ನಿರ್ಯಾತದ ದೇಶದ ಪ್ರಯತ್ನಕ್ಕೆ ಉತ್ತೇಜನ ನೀಡಲಿದೆ.

ಒಪ್ಪಲಾಗುವ ಪರಮಾಣು ಪೂರೈಕೆ ಗುಂಪಿನ (ಎಸ್‌ಎಸ್‌ಜಿ) ಪೂರ್ವ ಶರ್ತದಂತೆ, ವಲಯದ ಭಾಗಿದಾರಿಯನ್ನಾಗಿ ಮಾಡಿದಲ್ಲಿ, ಭಾರತಕ್ಕೆ ಸ್ವಚ್ಛ ಪರಮಾಣು ಇಂಧನ ಇಚ್ಛೆಯನ್ನು ಮುಂದುವರಿಸಲು ಅವಕಾಶ ಲಭಿಸಲಿದೆ.ಬಾಮ ಆಡಳಿತವು ಭಾರತದ ಸದಸ್ಯತ್ವದ ಅಹವಾಲನ್ನು ಪ್ರಬಲವಾಗಿ ಬೆಂಬಲಿಸಿದೆ. ಭಾರತವು ಇದಕ್ಕೆ ಕಳೆದ ವರ್ಷ ಅರ್ಜಿ ಸಲ್ಲಿಸಿತ್ತು. ಅದು, ಇತರ ಮೂರು ರ್ತು ನಿಯಂತ್ರಣ ವಲಯಗಳಾದ ಆಸ್ಟ್ರೇಲಿಯ ಗ್ರೂಪ್, ಎನ್‌ಎಸ್‌ಜಿ ಹಾಗೂ ವಸ್ಸೆನಾರ್ ವ್ಯವಸ್ಥೆಗಳಿಗೂ ಅರ್ಜಿ ಸಲ್ಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಜೂ.7ರಂದು ವಾಶಿಂಗ್ಟನ್‌ನಲ್ಲಿರುವಾಗ ಎಂಟಿಸಿಆರ್‌ನ ಸದಸ್ಯತ್ವ ಘೋಷಣೆಯಾಗಬಹುದೆಂದು ತಾವು ನಿರೀಕ್ಷಿಸಿದ್ದೇವೆ. ಭಾರತವು 2008ರಿಂದಲೇ ಏಕಪಕ್ಷೀಯವಾಗಿ ತಮ್ಮೆಲ್ಲ ಬದ್ಧತೆಗಳನ್ನು ಪೂರೈಸಿದ್ದೇವೆಂದು ಮೋದಿ ಸರಕಾರದ ಹಿರಿಯಾಕಾರಿಯೊಬ್ಬರು ‘ಹಿಂದೂಸ್ಥಾನ್ ಟೈಂಸ್’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News