ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ರವಿಶಾಸ್ತ್ರಿ

Update: 2016-06-07 06:31 GMT

ಹೊಸದಿಲ್ಲಿ, ಜೂ. 7: ಟೀಮ್‌ ಇಂಡಿಯಾದ ನಿರ್ದೇಶಕರಾಗಿದ್ದ ರವಿ ಶಾಸ್ತ್ರಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಟೀಮ್‌ ಇಂಡಿಯಾದ ಮಾಜಿ ಆಲ್‌ರೌಂಡರ್‌ ಶಾಸ್ತ್ರಿ ಅವರು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ
ಡಂಕನ್‌ ಫ್ಲೆಚರ‍್ ಮುಖ್ಯ ಹುದ್ದೆಯಿಂದ ನಿರ್ಗಮಿಸಿದ ಬಳಿಕ ತಂಡದಲ್ಲಿ ಕೋಚ್‌ ಹುದ್ದೆ ಖಾಲಿಯಾಗಿದೆ. ಕೋಚ್‌ರಹಿತ ತಂಡಕ್ಕೆ ರವಿಶಾಸ್ತ್ರಿ  ನಿರ್ದೇಶಕರಾಗಿ ಮಾರ್ಗದರ್ಶನ ನೀಡಿದ್ದಾರೆ. ಅವರ ಒಪ್ಪಂದದ ಅವಧಿ 2016 ಐಸಿಸಿ ಟ್ವೆಂಟಿ-20  ವಿಶ್ವಕಪ್‌ ಮುಗಿದ ಬೆನ್ನಲ್ಲೆ ಮುಕ್ತಾಯಗೊಂಡಿದೆ. 
ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್‌ ಪಾಟೀಲ್ ಕೋಚ್‌ ಹುದ್ದೆಗೆ  ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.ಮಾಜಿ ಆಲ್ ರೌಂಡರ್  ರವಿಶಾಸ್ತ್ರಿ ಟೀಮ್‌ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದರೊಂದಿಗೆ ಪೈಪೋಟಿ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News