ಕೇರಳ, ಓಡಿಶಾದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ

Update: 2016-06-07 07:07 GMT

ಹೊಸದಿಲ್ಲಿ, ಜೂ 7 : ಕೇರಳದಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರೆದು ಸಂಭ್ರಮಿಸುತ್ತಿದೆ ಎಂಬ ಭಾವನೆ ಇರುವಾಗಲೇ ಇದಕ್ಕೆ ವ್ಯತಿರಿಕ್ತ ವರದಿ ಬಂದಿದೆ. ಕೇರಳದ ಹಲವು ಪರಾಜಿತ ಬಿಜೆಪಿ ಅಭ್ಯರ್ಥಿಗಳು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೇ ಪತ್ರ ಬರೆದು ತಮಗೆ ಪಕ್ಷದ ಕಾರ್ಯಕರ್ತರ ಸಹಕಾರ ಹಾಗು ಮತ ಸಿಗಲಿಲ್ಲ ಎಂದು ದೂರಿದ್ದಾರೆ. ತಿರುವನಂತಪುರಮ್ ನಲ್ಲಿ ಹೀನಾಯವಾಗಿ ಸೋತ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರು ತಮಗೆ ಕೇವಲ ಯುವಜನತೆಯ ಮತ ಸಿಕ್ಕಿದೆ. ಪಕ್ಷದ ಮತಗಳು ಬಂದಿಲ್ಲ ಎಂದು ಅಮಿತ್ ಶಾ ಗೆ ದೂರಿದ್ದಾರೆ. ಇದೇ ರೀತಿ ಚೆನಗನ್ನೂರ್ , ಪಾಲಕ್ಕಾಡ್ ಹಾಗು ಅರುವಿಕ್ಕರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳೂ ಸ್ಥಳೀಯ ಬಿಜೆಪಿ ನಾಯಕರು ತಮಗೆ ಸಹಕಾರ ನೀಡಿಲ್ಲ ಎಂದು ಪತ್ರ ಬರೆದಿದ್ದಾರೆ. 

ಇದರಿಂದಾಗಿ ಚುನಾವಣಾ ಫಲಿತಾಂಶದ ಕುರಿತ ರಾಜ್ಯ ಸಮಿತಿಯ ವರದಿಯನ್ನು ಬಿಜೆಪಿ ವರಿಷ್ಠರು ತಿರಸ್ಕರಿಸಿದ್ದು ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ತಿಳಿಯಲು ಹಿರಿಯ ನಾಯಕರನ್ನು ಕಲಿಸಲು ನಿರ್ಧರಿಸಿದ್ದಾರೆ. 

ಇತ್ತ ಒಡಿಶಾದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಗುಲಿದೆ. ಇಲ್ಲಿನ ವ್ಯವಹಾರಗಳಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ 'ಹಸ್ತಕ್ಷೇಪ' ವನ್ನು ವಿರೋಧಿಸಿ ಅಲ್ಲಿನ ಬಿಜೆಪಿ ದಿಲೀಪ್ ರೇ ಅವರು ಕೇಂದ್ರ ಸರಕಾರದ ಎರಡು ವರ್ಷಗಳ ಸಾಧನೆಯ ಕಾರ್ಯಕ್ರಮವನ್ನೇ ಬಹಿಷ್ಕರಿಸಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ಬರಬೇಕಿದ್ದ ಕೇಂದ್ರದ ಇಬ್ಬರು ಸಚಿವರು ಕೊನೆ ಕ್ಷಣದಲ್ಲಿ ತಮ್ಮ ಭೇಟಿಯನ್ನೇ ರದ್ದು ಪಡಿಸಬೇಕಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News