ಶೌಚಾಲಯ ಕಟ್ಟಿಸಿದ್ದೇ ಮೋದಿ ಸರಕಾರದ ಸಾಧನೆ: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ

Update: 2016-06-07 10:23 GMT

ಹೊಸದಿಲ್ಲಿ/ಲಕ್ನೊ, ಜೂನ್ 7: ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್‌ರು ರವಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶೀ ಸಿದ್ಧಪೀಠ ಚಂಡಿ ಮಂದಿರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಶಂಕರಾಚಾರ್ಯರ ಹೇಳಿಕೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಕಂಪನ ಸೃಷ್ಟಿಸಬಹುದಾಗಿದೆ. ಮಥುರಾ ಹಿಂಸೆ ಉತ್ತರಪ್ರದೇಶ ಸರಕಾರದ ವೈಫಲ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಶಂಕರಾಚಾರ್ಯರು ಮಥುರಾದಲ್ಲಿ ನಡೆದ ಹಿಂಸಾಚಾರಕ್ಕಾಗಿ ಅಖಿಲೇಶ್ ಸರಕಾರವು ಜವಾಬ್ದಾರಿಯಾಗಿದೆ ಎಂದರು. ಎಲ್ಲ ಘಟನೆಯು ಜಾತಿವಾದದ ಕಾರಣದಿಂದಾಗಿದೆ.ಅಲ್ಲಿ ಅಕ್ರಮ ಜಮೀನು ವಶಪಡಿಸಿಟ್ಟುಕೊಂಡವರೂ ಯಾದವ್ ಆಗಿದ್ದರು. ಅವರಿಂದಾಗಿ ನಿರಪರಾಧಿಗಳು ಸಾವನ್ನಪ್ಪುವಂತಾಯಿತು ಎಂದು ಹೇಳಿದರು.

 ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ರಾಮ ಮತ್ತು ಕೃಷ್ಣನ ಫೋಟೊ ಇರಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಮುಸ್ಲಿಮರು ಮದ್ರಸಾದಲ್ಲಿ ಇಸ್ಲಾಮ್‌ನ ಶಿಕ್ಷಣವನ್ನು, ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಬೈಬಲ್‌ನ್ನು ಕಲಿಸುತ್ತಾರೆ.ಆದರೆ ನಮ್ಮ ಮಕ್ಕಳು ಧಾರ್ಮಿಕ ಶಿಕ್ಷಣ ಪಡೆಯಲು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮೋದಿಸರಕಾರದ ವಿರುದ್ಧ ಟೀಕಾ ಪ್ರಹಾರಿಸಿ ಮೋದಿ ಎರಡುವರ್ಷ ಪೂರ್ತಿ ಮಾಡಿದ ಬಳಿಕವೂ ಅಭಿವೃದ್ಧಿಯಾಗಿಲ್ಲ. ಎರಡು ವರ್ಷಗಳಲ್ಲಿ ಮೋದಿ ಸರಕಾರ ಅಭಿವೃದ್ಧಿಗಾಗಿ ಕೇವಲ ಶೌಚಾಲಯ ಕಟ್ಟಿಸಿದ್ದಾರೆ. ಸಾಮಾನ್ಯ ಜನರಿಗೆ ಆವಶ್ಯಕವಾದ ಶುದ್ಧ ನೀರು ಶುದ್ಧ ಆಹಾರ ಬಡವರಿಗೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News