ರಾಜನ್ ಭಾರತೀಯ ಪ್ರಜೆ: ಆರ್‌ಬಿಐ

Update: 2016-06-08 17:20 GMT

ಪಣಜಿ,ಜೂ.8: ತನ್ನ ಗವರ್ನರ್ ರಘುರಾಮ ರಾಜನ್ ಅವರು ಭಾರತೀಯ ಪಾಸ್‌ಪೋರ್ಟ್‌ನ್ನು ಹೊಂದಿದ್ದಾರೆ ಮತ್ತು ಅವರು ಭಾರತೀಯ ಪ್ರಜೆಯಾಗಿದ್ದಾರೆ ಎಂದು ಹೇಳುವ ಮೂಲಕ ರಿಜರ್ವ್ ಬ್ಯಾಂಕ್ ಅವರ ಪೌರತ್ವದ ಕುರಿತು ಯಾವುದೇ ಶಂಕೆಗೆ ಅಂತ್ಯ ಹಾಡಿದೆ.
ರಾಜನ್ ಅವರು ಹಾಲಿ ಭಾರತೀಯ ಪೌರತ್ವವನ್ನು ಹೊಂದಿದ್ದಾರೆ ಮತ್ತು ಅವರ ಹಿಂದಿನ ಪೌರತ್ವದ ಬಗ್ಗೆ ತನಗೆ ತಿಳಿದಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಅದು ತಿಳಿಸಿದೆ.
ರಾಜನ್ ಅವರ ಪೌರತ್ವದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ 2013,ಆ.12ರ ಪತ್ರಿಕಾ ವರದಿಯೊಂದನ್ನು ಆಧರಿಸಿ ದಿಲ್ಲಿಯ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷಚಂದ್ರ ಅಗರವಾಲ್ ಅವರು ಮೂರು ವರ್ಷಗಳ ಹಿಂದೆ ಈ ಅರ್ಜಿಯನ್ನು ಸಲ್ಲಿಸಿದ್ದು, ಆರ್‌ಬಿಐ ಅದಕ್ಕೆ ಈಗ ಉತ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News