ಮುಝಪ್ಫರ್‌ನಗರ: ಮುಸ್ಲಿಮ್ ಕೈದಿಗಳೊಂದಿಗೆ ರಮಝಾನ್‌ ಉಪವಾಸ ಆಚರಿಸುತ್ತಿರುವ ಹಿಂದೂ ಕೈದಿಗಳು

Update: 2016-06-08 17:32 GMT

ಮುಝಪ್ಫರ್‌ನಗರ, ಜೂ.8 : ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ 1,150 ಮುಸ್ಲಿಮ್ ಕೈದಿಗಳೊಂದಿಗೆ 60ಕ್ಕಿಂತ ಅಧಿಕ ಹಿಂದೂ ಕೈದಿಗಳು ಸೂರ್ಯೋದಯದಿಂದ ಅಸ್ತಮಾನದವರೆಗೆ ರಮಝಾನ್‌ನಲ್ಲಿ ವ್ರತಾಚರಣೆಯನ್ನು ಕೈಗೊಳ್ಳುವುದರ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ.

ಪವಿತ್ರ ರಮಝಾನ್ ತಿಂಗಳು ಸೋಮವಾರದಿಂದ ಪ್ರಾರಂಭವಾದಗಿನಿಂದ 65 ಹಿಂದೂ ಕೈದಿಗಳು 1,150 ಮುಸ್ಲಿಂ ಕೈದಿಗಳೊಂದಿಗೆ ಪ್ರತಿದಿನ ರಮಝಾನ್ ಉಪವಾಸವನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಜೈಲರ್ ಸತೀಶ್ ತ್ರಿಪಾಠಿ ತಿಳಿಸಿದ್ದಾರೆ.

ರಮಝಾನ್ ಉಪವಾಸ ಆಚರಿಸಲು ಕಾರಾಗೃಹದಲ್ಲಿ ವಿಶೇಷ ಸೌಲಭ್ಯಗಳನ್ನು ಕೈದಿಗಳಿಗಾಗಿ ನಮಾಜು ನಿರ್ವಹಿಸಲು , ಸಹರಿ ಮತ್ತು ಇಫ್ತಾರ್ ವೇಳೆ ಉಪವಾಸ ತೊರೆಯಲು ಎಲ್ಲ ರೀತಿಯ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.ಅಲ್ಲದೇ ಹಣ್ಣು ಹಂಪಲು ,ಖರ್ಜೂರ ,500 ಗ್ರಾಂ ಹಾಲು ಮತ್ತು ಇನ್ನು ಹಲವು ತಿನಿಸುಗಳನ್ನು ಕೈದಿಗಳಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News