ಕೇರಳ ಕ್ರೀಡಾ ಸಚಿವರ ವಿರುದ್ಧ ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಮುಖ್ಯ ಮಂತ್ರಿಗೆ ದೂರು

Update: 2016-06-09 10:43 GMT

ಕೊಚ್ಚಿ, ಜೂ.9: ಕೇರಳ ಕ್ರೀಡಾ ಸಚಿವ ಇ.ಪಿ. ಜಯರಾಜನ್ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ಅಂಜು ಬಾಬಿ ಜಾರ್ಜ್ ಅವರು ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ಅವಮಾನಿಸಿರುವುದಾಗಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ಗೆ ದೂರು ನೀಡಿದ್ದಾರೆ.
ಕೇರಳ ಸ್ಫೋರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿರುವ ಅಂಜು ಬಾಬಿ ಜಾರ್ಜ್ ಅವರು ಕಳೆದ ಯುಡಿಎಫ್ ಸರಕಾರದ ಅವಧಿಯಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು.
2003ರ ವರ್ಲ್ಡ್ ಚಾಂಪಿಯನ್‌ಶಿಪ್‌ನ ಅಥ್ಲೀಟಿಕ್ಸ್‌ನಲ್ಲಿ ಪದಕ ಜಯಿಸಿದ್ದ ಅಂಜು ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರಕ್ಕೆ ಬಂದ ಬೆನ್ನಲ್ಲೆ ಜೂ.7ರಂದು ಅಂಜು ಅವರು ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು.ಈ ಸಂದರ್ಭದಲ್ಲಿ ಸಚಿವರು ಅಂಜು ಅವರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆಂದು ಹೇಳಲಾಗಿದೆ.
 ‘‘ ಮೊದಲ ಸಭೆಯಲ್ಲೇ ಕೇರಳದ ಕ್ರೀಡಾರಂಗದ ಸ್ಥಾನಮಾನ ಗೊತ್ತಾಗಿತ್ತು, ಅವರು ನಮ್ಮನ್ನುದ್ದೇಶಿಸಿ ನೀವು ಹಿಂದಿನ ಸರಕಾರದ ಅವಧಿಯಲ್ಲಿ ನೇಮಕಗೊಂಡಿದ್ದರು.ನೀವು ಬೇರೆ ಪಕ್ಷದ ಸದಸ್ಯರು. ನಿಮಗೆ ನೇಮಕ ಮಾಡುವ ಅಧಿಕಾರ ಇಲ್ಲ. ಅದು ಕಾನೂನುಬಾಹಿರವಾಗಿದೆ ಎಂದು ಜಯರಾಜನ್ ಹೇಳಿರುವುದಾಗಿ ಅಂಜು ತಿಳಿಸಿದ್ದಾರೆ.
 ಅಂಜು ಅವರ ಜೊತೆಗೆ ಪ್ರೀಜಾ ಶ್ರೀಧರನ್, ಭಾರತದ ಹಾಕಿ ತಂಡದ ನಾಯ ಪಿ.ಆರ್.ಶ್ರೀಜೇಶ್ ಕೇರಳ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷ ಟಿ.ಸಿ. ಮ್ಯಾಥ್ಯೂಸ್ ಕೇರಳ ಸ್ಫೋಟ್ಸ್: ಕೌನ್ಸಿಲ್‌ನ ಸದಸ್ಯರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News