ಇಬ್ಬರು ಕೇಂದ್ರ ಸಚಿವರಲ್ಲಿ ಭಿನ್ನಮತ

Update: 2016-06-09 18:06 GMT

ಹೊಸದಿಲ್ಲಿ, ಜೂ.9: ಬಿಹಾರದಲ್ಲಿ ಕಳೆದ 6 ದಿನಗಳಲ್ಲಿ 200 ನೀಲ್‌ಗಾಯ್ ಅಥವಾ ನೀಲ ಕಾಡೆತ್ತುಗಳನ್ನು ಕೊಲ್ಲಲಾಗಿದೆ. ಇದನ್ನು ಖಂಡಿಸಿರುವ ಪ್ರಾಣಿ ಹಕ್ಕು ಕಾರ್ಯಕರ್ತೆ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ, ಅಳಿವಿನಂಚಿನಲ್ಲಿರುವ ಪ್ರಾಣಿಯೊಂದರೊಡನೆ ರಾಜಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಆದರೆ, ಇದನ್ನು ಸಮರ್ಥಿಸಿರುವ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಬಿಹಾರದ 39 ಜಿಲ್ಲೆಗಳಲ್ಲಿ ನವೆಂಬರ್ ತನಕ ನೀಲ್‌ಗಾಯ್‌ಗಳನ್ನು ಗುಂಡಿಕ್ಕಿ ಕೊಲ್ಲುವ ಪರವಾನಿಗೆ ಸಿಂಧುವಾಗಿರುತ್ತದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹತ್ಯಾಕಾಂಡಕ್ಕೆ ಅವಕಾಶ ನೀಡಲಾಗಿದೆ. ಪರಿಸರ ಸಚಿವಾಲಯವು ಇಲ್ಲ ರಾಜ್ಯಗಳಿಗೆ ಪತ್ರ ಬರೆದು ಹತ್ಯೆಗೆ ಅನುಮತಿ ನೀಡಬೇಕಾದ ಪ್ರಾಣಿಗಳ ಪಟ್ಟಿಯನ್ನು ಕೇಳುತ್ತಿದೆ ಹಾಗೂ ಅದಕ್ಕೆ ಅವಕಾಶ ನೀಡುವ ಭರವಸೆ ನೀಡುತ್ತಿದೆ ಎಂದು ಮೇನಕಾ ಟೀಕಿಸಿದ್ದಾರೆ.
ನೀಲ್‌ಗಾಯ್‌ಗಳು ಅಪಾರ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಎಕ್ರೆಗಟ್ಟಲೆ ಕೃಷಿಯನ್ನು ಹಾಳು ಮಾಡುತ್ತವೆ ಹಾಗೂ ಗೋಧಿ, ಬೇಳೆ ಕಾಳು ಇತ್ಯಾದಿಗಳ ಹೊಲಗಳಿಗೆ ಸತತವಾಗಿ ನುಗ್ಗುತ್ತವೆ. ಆದುದರಿಂದ ಕೇಂದ್ರ ಸರಕಾರ ಅಧಿಕಾರ ನೀಡುವ ವೃತ್ತಿಪರ ಗುರಿಕಾರರಿಂದ ಅವುಗಳನ್ನು ಕೊಲ್ಲಿಸಲು ಅನುಮತಿ ನೀಡುವಂತೆ ಬಿಹಾರ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News